ADVERTISEMENT

ವಾರ್ಷಿಕ ಕ್ರೀಡಾಕೂಟದಲ್ಲಿ ಮಿಂಚಿದ ನೌಕರರು: ಲತಾಮಣಿ, ವೆಂಕಟೇಶ್ ವೇಗದ ಓಟಗಾರರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:27 IST
Last Updated 29 ಜನವರಿ 2026, 6:27 IST
ತುಮಕೂರಿನಲ್ಲಿ ಬುಧವಾರ ಸರ್ಕಾರಿ ನೌಕರರ ಓಟದ ಸ್ಪರ್ಧೆ ನಡೆಯಿತು
ತುಮಕೂರಿನಲ್ಲಿ ಬುಧವಾರ ಸರ್ಕಾರಿ ನೌಕರರ ಓಟದ ಸ್ಪರ್ಧೆ ನಡೆಯಿತು   

ತುಮಕೂರು: ಜಿಲ್ಲಾ ಆಡಳಿತ, ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಚಾಲನೆ ದೊರೆಯಿತು.

100 ಮೀಟರ್‌ ಓಟದ ಸ್ಪರ್ಧೆಯ 35 ವರ್ಷದ ಒಳಗಿನವರ ವಿಭಾಗದಲ್ಲಿ ಕುಣಿಗಲ್‌ನ ಅಪೇಕ್ಷಾ, ಎನ್‌.ಸಿ.ಮಮತಾ, ಎಚ್‌.ಎಂ.ರಕ್ಷಿತಾ ಮೊದಲ ಮೂರು ಸ್ಥಾನ ಪಡೆದು ಗಮನ ಸೆಳೆದರು. 45–60 ವರ್ಷದವರ ವಿಭಾಗದಲ್ಲಿ ಚಿಕ್ಕನಾಯಕನಹಳ್ಳಿ ಕೆ.ಎಲ್‌.ಲತಾಮಣಿ, ಪುರುಷರ 50–60 ವರ್ಷದವರ ವಿಭಾಗದಲ್ಲಿ ಕುಣಿಗಲ್‌ನ ಕೆ.ವೆಂಕಟೇಶ್‌ ಪ್ರಥಮ ಸ್ಥಾನ ಪಡೆದರು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ADVERTISEMENT

ಮಹಿಳೆಯರ ವಿಭಾಗ: 35 ವರ್ಷದ ಒಳಗೆ– 100 ಮೀಟರ್‌ ಓಟ– ಅಪೇಕ್ಷಾ ಸತೀಶ್‌ (ಕುಣಿಗಲ್‌), ಎನ್‌.ಸಿ.ಮಮತಾ (ಕುಣಿಗಲ್‌), ಎಚ್‌.ಎಂ.ರಕ್ಷಿತಾ (ಕುಣಿಗಲ್‌). ಉದ್ದ ಜಿಗಿತ– ಜಿ.ಎಲ್‌.ನಾಗವೇಣಿ (ತುಮಕೂರು), ಎಸ್‌.ವಿ.ಸುಚಿತ್ರಾ (ಗುಬ್ಬಿ), ಎಸ್‌.ವಿ.ಅಪ್ಸರ (ಗುಬ್ಬಿ).

35–45 ವರ್ಷದವರ 100 ಮೀಟರ್‌: ಎಚ್‌.ಬಿ.ಬಾಲಮ್ಮ (ಕುಣಿಗಲ್‌), ಪಿ.ರೂಪಾದೇವಿ (ಗುಬ್ಬಿ), ಎ.ಎಸ್‌.ಗೀತಾ (ಕುಣಿಗಲ್‌). ಉದ್ದ ಜಿಗಿತ– ಎಚ್‌.ಸಿ.ಆಶಾ (ಕೊರಟಗೆರೆ), ಎಂ.ಬಿ.ಗಂಗಮ್ಮ (ತುರುವೇಕೆರೆ), ಎಂ.ಚೇತನಾ (ಗುಬ್ಬಿ).

45–60 ವರ್ಷದವರ 100 ಮೀಟರ್‌ ಓಟ: ಕೆ.ಎಲ್‌.ಲತಾಮಣಿ (ಚಿಕ್ಕನಾಯಕನಹಳ್ಳಿ), ಕೆ.ಎಸ್‌.ಸುನಂದಮ್ಮ (ಗುಬ್ಬಿ), ಸಿ.ಎಚ್‌.ಲತಾ (ತುಮಕೂರು). ಉದ್ದ ಜಿಗಿತ– ಕೆ.ಎಸ್‌.ಸುನಂದಮ್ಮ (ಗುಬ್ಬಿ), ಸರ್ವಮಂಗಳಾ (ಚಿಕ್ಕನಾಯಕನಹಳ್ಳಿ), ಬಿ.ಗೌರಮ್ಮ (ತುಮಕೂರು).

ಪುರುಷರ ವಿಭಾಗ: 40 ವರ್ಷದ ಒಳಗೆ– 100 ಮೀಟರ್‌ ಓಟ– ಕೆ.ಸಲೀಮ್‌ (ತುರುವೇಕೆರೆ), ಎಸ್‌.ಚಿಕ್ಕಣ್ಣ (ಚಿಕ್ಕನಾಯಕನಹಳ್ಳಿ), ಬಿ.ಪಿ.ಚಿದಾನಂದ್‌ (ಶಿರಾ). 400 ಮೀಟರ್‌– ಕೆ.ಪಿ.ದರ್ಶನ್‌ (ಕುಣಿಗಲ್‌), ಕೆ.ಕಿರಣ್‌ (ಚಿಕ್ಕನಾಯಕನಹಳ್ಳಿ), ಪ್ರಶಾಂತ್‌ (ತಿಪಟೂರು). ಉದ್ದ ಜಿಗಿತ– ಕೃಷ್ಣಪ್ಪ ಜಿ.ತಳವಾರ್‌ (ತುಮಕೂರು), ಎನ್‌.ಎಸ್‌.ಸಂತೋಷ್‌ಕುಮಾರ್‌ (ತಿಪಟೂರು), ಎಂ.ಎಸ್‌.ನವಸುದೀಪ್‌ (ಮಧುಗಿರಿ). ಶಾಟ್‌ಪುಟ್‌ ಎಸೆತ– ಕೆ.ಸುರೇಶ್‌ (ಶಿರಾ), ಎಸ್‌.ವಿ.ಭರತ್‌ (ತುಮಕೂರು), ಪಿ.ನವಿನ್‌ಕುಮಾರ್‌ (ಶಿರಾ).

40–50 ವರ್ಷ– 100 ಮೀಟರ್‌ ಓಟ– ಎಸ್‌.ಕೆ.ಸುರೇಶ್‌ (ಕುಣಿಗಲ್‌), ಸಿ.ಆರ್‌.ನವೀನ್‌ಕುಮಾರ್‌ (ಪಾವಗಡ). 400 ಮೀಟರ್‌– ಜೆ.ಎಚ್‌.ಭೃಂಗೇಶ್‌ (ಮಧುಗಿರಿ), ಎ.ಆರ್‌.ಭಾನುಪ್ರಕಾಶ್‌ (ಗುಬ್ಬಿ), ಸಿ.ಆರ್‌.ನವೀನ್‌ಕುಮಾರ್‌ (ಪಾವಗಡ). ಗುಂಡು ಎಸೆತ– ಟಿ.ಎಚ್‌.ಹನುಮೇಶ್‌ (ಕುಣಿಗಲ್‌), ಪಿ.ಪ್ರಸನ್ನಕುಮಾರ್‌ (ತುಮಕೂರು), ಕೆ.ಸಿ.ಭಾನುಪ್ರಕಾಶ್‌ (ಮಧುಗಿರಿ). ಉದ್ದ ಜಿಗಿತ– ಜಿ.ಕೆ.ಸುರೇಶ್‌ (ಕುಣಿಗಲ್‌), ಎಂ.ನರಸಿಂಹರೆಡ್ಡಿ (ಪಾವಗಡ), ಟಿ.ಸಿ.ನಾಗೇಂದ್ರ (ಗುಬ್ಬಿ).

50–60 ವರ್ಷ– 100 ಮೀಟರ್‌ ಓಟ– ಕೆ.ವೆಂಕಟೇಶ್‌ (ಕುಣಿಗಲ್‌), ಎಂ.ಎಸ್‌.ಜಯಣ್ಣ (ಕೊರಟಗೆರೆ), ನಿಜ ಲೋಕೇಶ್‌ (ಚಿಕ್ಕನಾಯಕನಹಳ್ಳಿ). 400 ಮೀಟರ್‌– ವರದರಾಜು (ತುರುವೇಕೆರೆ), ಎಂ.ಎಸ್‌.ಜಯಣ್ಣ (ಕೊರಟಗೆರೆ), ನಿಜ ಲೋಕೇಶ್‌ (ಚಿಕ್ಕನಾಯಕನಹಳ್ಳಿ). ಅಶ್ವತ್ಥ ನಾರಾಯಣ (ಪಾವಗಡ), ರೇಣುಕಪ್ಪ (ತಿಪಟೂರು), ವರದರಾಜು (ತುರುವೇಕೆರೆ).

1,500 ಮೀಟರ್‌ ಓಟ– ಎನ್‌.ಬಿ.ನಳಿನ್‌ (ತಿಪಟೂರು), ಗುರುಕಿಶೋರ್‌ (ಪಾವಗಡ), ಬಿ.ಎನ್‌.ಮಹಾಂತೇಶ್‌ (ಚಿಕ್ಕನಾಯಕನಹಳ್ಳಿ). 5 ಸಾವಿರ ಮೀಟರ್‌ ಓಟ– ಎ.ಎಂ.ಸಿದ್ಧೇಶ್ವರ (ತಿಪಟೂರು), ಹರ್ಷ ಗೌಡ (ಗುಬ್ಬಿ), ಪಿ.ಅಮರನಾಥ್‌ (ತುಮಕೂರು).

ಓಟದ ಸ್ಪರ್ಧೆಯಲ್ಲಿ ಗುರಿಯ ಕಡೆಗೆ ಸಾಗಿದ ಮಹಿಳಾ ನೌಕರರು
ಜಿಗಿತದ ಭಂಗಿ
ಕಬಡ್ಡಿ ಪಂದ್ಯದ ಸೆಣಸಾಟ
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗಮನ ಸೆಳೆದ ಗಾಯನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.