ADVERTISEMENT

ತುಮಕೂರು: ಉತ್ತಮ ಬೆಳೆ ನಿರೀಕ್ಷೆಯಲ್ಲಿ ಶೇಂಗಾ ಬೆಳೆಗಾರರು

ಪಾವಗಡ ತಾಲ್ಲೂಕಿನಾದ್ಯಂತ 15,393 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:32 IST
Last Updated 18 ಜುಲೈ 2025, 2:32 IST
ಪಾವಗಡ ತಾಲ್ಲೂಕು ಕೆ.ಟಿ. ಹಳ್ಳಿ ಬಳಿ ಮೇ ತಿಂಗಳಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ
ಪಾವಗಡ ತಾಲ್ಲೂಕು ಕೆ.ಟಿ. ಹಳ್ಳಿ ಬಳಿ ಮೇ ತಿಂಗಳಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ   

ಪಾವಗಡ: ತಾಲ್ಲೂಕಿನಾದ್ಯಂತ ಈಗಾಗಲೇ ಶೇಂಗಾ ಬಿತ್ತನೆ ಮುಕ್ತಾಯಗೊಂಡಿದ್ದು, ಈ ಬಾರಿ ಉತ್ತಮ ಬೆಳೆ ಬರುವ ನಿರೀಕ್ಷೆ ರೈತರಲ್ಲಿದೆ.

ತಾಲ್ಲೂಕಿನಾದ್ಯಂತ ಈಗಾಗಲೇ ಸುಮಾರು 15,393 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ನಿಡಗಲ್ ಹೋಬಳಿಯಲ್ಲಿ ಅತಿ ಹೆಚ್ಚು 7,840 ಹೆಕ್ಟೇರ್ ಪ್ರದೇಶಲ್ಲಿ ಶೆಂಗಾ ಬಿತ್ತನೆಯಾಗಿದೆ. ಕಸಬಾ ಹೋಬಳಿಯಲ್ಲಿ 5,148 ಹೆಕ್ಟೇರ್, ನಾಗಲಮಡಿಕೆ 2,208, ವೈ.ಎನ್ ಹೊಸಕೋಟೆ ಹೋಬಳಿಯಲ್ಲಿ 5,099 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಮೇ ತಿಂಗಳಲ್ಲಿ ಬಿತ್ತನೆಯಾದ ಶೆಂಗಾ ಬೆಳೆ ಕಾಯಿ ಕಟ್ಟುವ ಹಂತದಲ್ಲಿದೆ. ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿದ ಬೆಳೆ ಹೂವು ಬಿಡುವ ಹಂತದಲ್ಲಿದೆ. ಜುಲೈ ತಿಂಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆ ಮೊಳಕೆ ಹಂತದಲ್ಲಿದೆ.

ADVERTISEMENT

ಈವರೆಗೆ ತಾಲ್ಲೂಕಿನ ಶೆಂಗಾ ಬೆಳೆಗೆ ಯಾವುದೇ ಕೀಟ, ರೋಗ ವ್ಯಾಪಿಸಿಲ್ಲ. ಇದೇ ಸ್ಥಿತಿ ಮುಂದುವರೆದು ಅಗತ್ಯಕ್ಕೆ ತಕ್ಕಷ್ಟು ಮಳೆಯಾದರೆ ಉತ್ತಮ ಬೆಳೆ ಕೈಗೆ ಸಿಗಲಿದೆ ಎಂಬ ಸಂತಸ ತಾಲ್ಲೂಕಿನ ರೈತರ ಮೊಗದಲ್ಲಿ ಕಾಣುತ್ತಿದೆ.

ಈ ಬಾರಿ ತಾಲ್ಲೂಕಿನಾದ್ಯಂತ 1,471 ಹೆಕ್ಟೇರ್ ಪ್ರದೇಶದಲ್ಲಿ ಅಂತರ ಬೆಳೆ, ಪ್ರಮುಖ ಬೆಳೆಯಾಗಿ ತೊಗರಿ ಬಿತ್ತನೆ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಶೇಂಗಾ ಬೆಳೆ ಕೈಗೆಹತ್ತಿರಲಿಲ್ಲ. ಈ ಬಾರಿ ಉತ್ತಮ ಬೆಳೆ, ಬೆಲೆ ಸಿಗಲಿದೆ ಎಂಬ ಆಶಯ ರೈತರದ್ದು.

ಪಾವಗಡ ತಾಲ್ಲೂಕು ಕೆ ಟಿ ಹಳ್ಳಿ ಬಳಿ ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಹೂ ಬಿಟ್ಟಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.