ADVERTISEMENT

ಮಹಿಳಾ ಸಂಘದ ಸದಸ್ಯರ ನಡುವೆ ರಂಪಾಟ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 15:34 IST
Last Updated 23 ಜನವರಿ 2019, 15:34 IST
ಗುಬ್ಬಿ ಪಟ್ಟಣದ ಸ್ಟೆಲ್ಲಾ ಮೆರಿಸ್ ಶಾಲೆಯ ಹತ್ತಿರ ಮಹಿಳೆಯರ ನಡುವೆ ನಡೆದ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಗುಬ್ಬಿ ಪಟ್ಟಣದ ಸ್ಟೆಲ್ಲಾ ಮೆರಿಸ್ ಶಾಲೆಯ ಹತ್ತಿರ ಮಹಿಳೆಯರ ನಡುವೆ ನಡೆದ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ   

ಗುಬ್ಬಿ: ಪಟ್ಟಣದ ಸ್ಟೆಲ್ಲಾ ಮೆರಿಸ್ ಶಾಲೆಯ ಹತ್ತಿರ ಹಣಕಾಸು ವಿಚಾರಕ್ಕೆ ಮಹಿಳೆಯರ ನಡುವೆ ಕಿತ್ತಾಟ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಘ ಸದಸ್ಯರ ನಡುವೆ ಹಣಕಾಸು ವಿಚಾರಕ್ಕೆ ಗಲಾಟೆ ನಡೆದಿದೆ. ಒಬ್ಬ ಮಹಿಳೆಯನ್ನು ಮತ್ತೊಬ್ಬ ಮಹಿಳೆ ಎಳೆದೊಯ್ಯುತ್ತಿದ್ದರೆ, ಇನ್ನೊಬ್ಬ ಮಹಿಳೆ ಕಾಲಲ್ಲಿ ಒದೆಯುತ್ತಿದ್ದಾರೆ. ಅವರ ಕಿತ್ತಾಟ- ಕೂಗಾಟಕ್ಕೆ ನಾಯಿಯೊಂದು ನೆಲದ ಮೇಲೆ ಒದ್ದಾಡುತ್ತಿದ್ದ ಮಹಿಳೆಯನ್ನು ಕಚ್ಚಲು ಮುಂದಾಗುತ್ತಿರುವ ಚಿತ್ರಣ ಇದೆ.

ಸ್ಟೆಲ್ಲಾ ಮೆರಿಸ್ ಶಾಲೆಯಲ್ಲಿ ಹೈಸ್ಕೂಲ್ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಘಟನೆಯನ್ನು ನಿಂತು ನೋಡುತ್ತಿದ್ದರೆ, ದಾರಿಹೋಕರು ಕ್ಷಣಕಾಲ ನಿಂತು ನೋಡಿ ‘ಈ ಉಸಾಬರಿ ನಮಗೇಕೆ?’ ಎಂದು ಕಾಲ್ಕಿತ್ತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.