ADVERTISEMENT

ಪಾರ್ಟ್‌ಟೈಮ್‌ ಕೆಲಸದ ಆಮಿಷ: ಆರೋಗ್ಯಾಧಿಕಾರಿಗೆ ₹7 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:19 IST
Last Updated 22 ಮೇ 2025, 15:19 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಪಾರ್ಟ್‌ ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ಶಿರಾ ತಾಲ್ಲೂಕಿನ ಬೆಂಚಿ ಬಸವನಹಳ್ಳಿಯ ಸಮುದಾಯ ಆರೋಗ್ಯಾಧಿಕಾರಿ ಬಿ.ವಿ.ಮುರಳೀಧರ್‌ ₹7.60 ಲಕ್ಷ ಕಳೆದುಕೊಂಡಿದ್ದಾರೆ.

ಸೈಬರ್‌ ಆರೋಪಿಗಳು ವಾಟ್ಸ್‌ ಆ್ಯಪ್‌ ಮುಖಾಂತರ ಪಾರ್ಟ್‌ಟೈಮ್‌ ಕೆಲಸ ಆಮಿಷ ಒಡ್ಡಿದ್ದಾರೆ. ಅವರು ಕಳುಹಿಸಿದ ಲಿಂಕ್‌ ಕ್ಲಿಕ್‌ ಮಾಡಿದ ನಂತರ R-4212 WILLIAMS SONOMA ಎಂಬ ಟೆಲಿಗ್ರಾಂ ಗ್ರೂಪ್‌ ತೆರೆದುಕೊಂಡಿದೆ. ಸದರಿ ಗ್ರೂಪ್‌ನಲ್ಲಿ ಕಳುಹಿಸಿದ ವೆಬ್‌ಪೇಜ್‌ ಲಿಂಕ್‌ನಲ್ಲಿ ಮುರಳೀಧರ್‌ ಅಗತ್ಯ ಮಾಹಿತಿ ಸಲ್ಲಿಸಿದ್ದಾರೆ.

‘ವಿವಿಧ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಟಾಸ್ಕ್‌ ಪೂರ್ಣಗೊಳಿಸಿದರೆ ಹೆಚ್ಚಿನ ಲಾಭ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಮೊದಲಿಗೆ ಬೋನಸ್‌ ₹11 ಸಾವಿರ, ಲಾಭಾಂಶ ಎಂದು ₹1,347ರಷ್ಟು ಹಣವನ್ನು ಮುರಳೀಧರ್‌ ಖಾತೆಗೆ ವರ್ಗಾಯಿಸಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿ, ಉತ್ಪನ್ನ ಖರೀದಿಸಿ ಮಾರಾಟ ಮಾಡುತ್ತಾ ಉತ್ತಮ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ಮುರಳೀಧರ್‌ ಹಂತ ಹಂತವಾಗಿ ಒಟ್ಟು ₹7,79,246 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರಿಗೆ ₹18,741 ವಾಪಸ್‌ ಬಂದಿದೆ.

ADVERTISEMENT

‘ಇನ್ನೂ ₹7 ಲಕ್ಷ ಕಟ್ಟಿದರೆ ಮಾತ್ರ ಹಣ ಮರಳಿಸುತ್ತೇವೆ ಎನ್ನುತ್ತಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಹಣ ವಾಪಸ್‌ ಕೊಡಿಸುವಂತೆ’ ನೀಡಿದ ದೂರಿನ ಮೇರೆಗೆ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.