ADVERTISEMENT

ಕಲೆಯಿಂದ ಇತಿಹಾಸ ಶ್ರೀಮಂತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 3:17 IST
Last Updated 3 ಜನವರಿ 2021, 3:17 IST
ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ನಡೆಯಿತು
ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ನಡೆಯಿತು   

ಗುಡಿಬಂಡೆ: ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಿಗಳ ಕೊಡುಗೆ ಅಪಾರವಾದುದು. ಕಲಾ ಕೌಶಲವನ್ನು ನಾಡಿಗೆ ನೀಡಿ ಅಜರಾಮರರಾದವರು ಅಮರಶಿಲ್ಪಿ ಜಕಣಾಚಾರಿ ಎಂದು ತಹಶೀಲ್ದಾರ್ ವರದರಾಜು ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದರು.

ಜಕಣಾಚಾರ್ಯರು ತುಮಕೂರು ಜಿಲ್ಲೆಯ ಗೂಳೂರು ಸಮೀಪದ ಕೈದಾಳ ಗ್ರಾಮದವರು. ಹನ್ನೆರಡನೇ ಶತಮಾನದಲ್ಲಿ ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ ಅನೇಕ ಶಿಲ್ಪಕಲೆಗಳನ್ನು ಕೆತ್ತಿದರೂ ವಿಶ್ವಪಾರಂಪರಿಕ ಪ್ರಸಿದ್ಧ ಬೇಲೂರಿನ ಚನ್ನಕೇಶವ ದೇವಾಲಯವನ್ನು ಕೆತ್ತಿದವರು. ಇಂತಹ ಅಪ್ರತಿಮ ಶಿಲ್ಪಿಯ ಸ್ಮರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಶಿಕ್ಷಣ ಸಂಯೋಜಕ ಜಿ.ವಿ.ಚಂದ್ರಶೇಖರ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಬ್ರಹ್ಮಚಾರಿ, ಕಾರ್ಯದರ್ಶಿ ವೀರಾಚಾರಿ, ವೆಂಕಟಾಚಾರಿ, ನಾರಾಯಣಾಚಾರಿ, ಶಿವಚಾರಿ, ಗಂಗಾಧರಾ ಚಾರಿ, ವೆಂಕಟಾಚಲಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.