ADVERTISEMENT

ಹಾಪ್‍ಕಾಮ್ಸ್‌ನಿಂದ ರೈತರ ಹಣ್ಣು ತರಕಾರಿ ಖರೀದಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 12:10 IST
Last Updated 3 ಏಪ್ರಿಲ್ 2020, 12:10 IST
ಡಾ.ಕೆ.ರಾಕೇಶ್‌ಕುಮಾರ್
ಡಾ.ಕೆ.ರಾಕೇಶ್‌ಕುಮಾರ್   

ತುಮಕೂರು: ಲಾಕ್‌ಡೌನ್ ಇರುವುದರಿಂದ ಜಿಲ್ಲೆಯ ರೈತರು ಬೆಳೆದಿರುವ ಕಲ್ಲಂಗಡಿ, ಕರಬೂಜ, ಟೊಮೆಟೊ ಹಾಗೂ ಪಪ್ಪಾಯಿ ಹಣ್ಣುಗಳನ್ನು ಹಾಪ್‍ಕಾಮ್ಸ್ ಮೂಲಕ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

ವ್ಯಾಪಾರಿಗಳು ಹಾಗೂ ರೈತರನ್ನೂ ಸಂಪರ್ಕಿಸುವ ಕೆಲಸವನ್ನು ಮಾಡಲಾಗುವುದು. ಇದಕ್ಕಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಗತ್ಯವಿರುವಷ್ಟು ತರಕಾರಿ, ಹಣ್ಣನ್ನು ಜಿಲ್ಲೆಯಲ್ಲೇ ಮಾರಾಟ ಮಾಡಲಾಗುವುದು. ಉಳಿದಂತೆ ಚಿತ್ರದುರ್ಗ, ಬೆಂಗಳೂರು ಜಿಲ್ಲೆಗಳಿಗೆ ಕಳುಹಿಸಲಾಗುವುದು.

ಆಂಧ್ರಪ್ರದೇಶದ ಅನಂತಪುರದ ವ್ಯಾಪಾರಿಗಳು ಜಿಲ್ಲೆಯ ರೈತರನ್ನು ಸಂಪರ್ಕಿಸುವಂತೆ ಮಾಡಲಾಗುವುದು. ಅಗತ್ಯ ವಸ್ತುಗಳನ್ನು ಎಪಿಎಂಸಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಹಾಪ್‍ಕಾಮ್ಸ್ ಮೂಲಕ ಮನೆ ಮನೆಗೆ ಸರಬರಾಜು ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆಗಾಗಿ ತುಮಕೂರಿನಲ್ಲಿ 2 ನಿರಾಶ್ರಿತರ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 122 ಜನರು ಇದ್ದಾರೆ. 1,506 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದೆ. ಅವರಿಗೆ ಸಂಬಂಧಿಸಿದ ಗುತ್ತಿಗೆದಾರರ ಮೂಲಕ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಿಸಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.