ADVERTISEMENT

ಹುಳಿಯಾರು | ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ಗೃಹ ಬಳಕೆ ವಸ್ತು ಭಸ್ಮ

​ಪ್ರಜಾವಾಣಿ ವಾರ್ತೆ
Published 6 ಮೇ 2025, 13:19 IST
Last Updated 6 ಮೇ 2025, 13:19 IST
ಹುಳಿಯಾರು ಉರ್ದು ಶಾಲೆ ರಸ್ತೆಯ ಮನೆಗೆ ಬೆಂಕಿ ತಗುಲಿ ಗೃಹ ಬಳಕೆ ವಸ್ತುಗಳು ಸುಟ್ಟು ಹೋಗಿವೆ
ಹುಳಿಯಾರು ಉರ್ದು ಶಾಲೆ ರಸ್ತೆಯ ಮನೆಗೆ ಬೆಂಕಿ ತಗುಲಿ ಗೃಹ ಬಳಕೆ ವಸ್ತುಗಳು ಸುಟ್ಟು ಹೋಗಿವೆ   

ಹುಳಿಯಾರು: ಪಟ್ಟಣದ ಉರ್ದು ಶಾಲೆ ರಸ್ತೆಯ ರಹೀಂ ಉನ್ನೀಸಾ ಅವರ ಮನೆಗೆ ಸೋಮವಾರ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು ಲಕ್ಷಾಂತರ ಬೆಲೆ ಬಾಳುವ ಗೃಹ ಬಳಕೆ ವಸ್ತುಗಳು ಬೆಂಕಿಗೆ ಆಹುತಿ ಆಗಿದೆ.

ಮನೆಯ ಮೊದಲ ಮಹಡಿಯಲ್ಲಿ ವಿದ್ಯತ್‌ ಶಾರ್ಟ್‌ ಆಗಿ ಬೆಂಕಿ ಹೊತ್ತಿಕೊಂಡು ಹೊಗೆ ತುಂಬಿಕೊಂಡಿದೆ. ದಾರಿಹೋಕರು ಗಮನಿಸಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಮಂಚ, ಹಾಸಿಗೆ ಹೊತ್ತಿಕೊಂಡಿದೆ. ಅಗ್ನಿಶಾಮಕ ಠಾಣೆಯವರು ಬಂದು ಬೆಂಕಿ ನಂದಿಸುವಷ್ಟರಲ್ಲಿ ಒಡವೆ, ಹಣ ಸೇರಿದಂತೆ ಗೃಹ ಬಳಕೆ ವಸ್ತುಗಳು ಸುಟ್ಟು ಹೋಗಿವೆ.

ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.