ಗುಬ್ಬಿ: ಗುಡಿ-ಗೋಪುರಗಳ ನಿರ್ಮಾಣ ಸಮಾಜದಲ್ಲಿ ಸಾಮರಸ್ಯ ಹಾಗೂ ಒಗ್ಗಟ್ಟನ್ನು ಮೂಡಿಸಲು ಪೂರಕವಾಗಿದೆ ಎಂದು ಕೆರಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಿಟ್ಟೂರು ಹೋಬಳಿ ಇಡಕನಹಳ್ಳಿಯಲ್ಲಿ ಮಲ್ಲಿಕಾರ್ಜುನ ದೇವಾಲಯ ಲೋಕಾರ್ಪಣೆ, ಸ್ಥಿರಬಿಂಬ ಪ್ರಾಣ ಪ್ರತಿಷ್ಠಾಪನೆಗೊಳಿಸಿ ಮಾತನಾಡಿದರು.
ದೇವಾಲಯಗಳು ಧಾರ್ಮಿಕ ಜ್ಞಾನ ಹೆಚ್ಚಿಸಿದರೆ, ವಿದ್ಯಾಸಂಸ್ಥೆಗಳು ಭೌತಿಕ ಜ್ಞಾನ ಹೆಚ್ಚಿಸಲು ಸಹಕಾರಿ. ಹಾಗಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೂ ಆದ್ಯತೆ ನೀಡಬೇಕಿದೆ ಎಂದರು.
ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಧರ್ಮ ಪರಂಪರೆ ವಿಶ್ವ ಶ್ರೇಷ್ಠದ್ದಾಗಿದೆ. ಎಲ್ಲ ತಾರತಮ್ಯ ಬದಿಗೊತ್ತಿ ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಮುಂದುವರೆದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ದೇವಾಲಯ ಲೋಕಾರ್ಪಣೆ ಅಂಗವಾಗಿ ಎರಡು ದಿನಗಳು ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.