ADVERTISEMENT

ಉದ್ಘಾಟನೆಗೆ ಕಾದಿದೆ ಕ್ರೀಡಾ ಸಮುಚ್ಚಯ

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕ್ಯಾತ್ಸಂದ್ರದ ಬಳಿ ₹ 5.6 ಕೋಟಿಯಲ್ಲಿ ನಿರ್ಮಿಸಿದ ಬೃಹತ್ ಕಟ್ಟಡ

ರಾಮರಡ್ಡಿ ಅಳವಂಡಿ
Published 19 ಮೇ 2019, 19:34 IST
Last Updated 19 ಮೇ 2019, 19:34 IST
ಕ್ಯಾತ್ಸಂದ್ರದ ಬಳಿ ವಸತಿ ಬಡಾವಣೆಯಲ್ಲಿ ನಿರ್ಮಿಸಿರುವ ಕ್ರೀಡಾ ಸಮುಚ್ಚಯ
ಕ್ಯಾತ್ಸಂದ್ರದ ಬಳಿ ವಸತಿ ಬಡಾವಣೆಯಲ್ಲಿ ನಿರ್ಮಿಸಿರುವ ಕ್ರೀಡಾ ಸಮುಚ್ಚಯ   

ತುಮಕೂರು: ನಗರದ ಜನರ ಬಹುದಿನಗಳ ಕನಸಾಗಿದ್ದ ಕ್ರೀಡಾ ಸಮುಚ್ಚಯ ಕೊನೆಗೂ ಸಾಕಾರಗೊಳ್ಳುತ್ತಿದೆ. ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಪಟ್ಟಂತೆ ಪ್ರತಿಭಾವಂತರು ಇದ್ದಾರೆ. ತುಮಕೂರು ರಾಜಧಾನಿಗೆ ಹತ್ತಿರ ಇದ್ದರೂ ಇಲ್ಲಿ ಕ್ರೀಡಾ ಸಮುಚ್ಚಯ ಇರಲಿಲ್ಲ.

ಈ ಕೊರತೆ ನೀಗಿಸಲು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟುಡಾ) ಕ್ರೀಡಾ ಸಮುಚ್ಚಯವನ್ನು ಕ್ಯಾತ್ಸಂದ್ರದಲ್ಲಿರುವ ಪ್ರಾಧಿಕಾರದ ವಸತಿ ಬಡಾವಣೆಯ ಸಿ.ಎ.ನಿವೇಶನದಲ್ಲಿ ನಿರ್ಮಿಸಿದೆ.

₹ 4.5 ಕೋಟಿ ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಿದ ಈ ಸಮುಚ್ಚಯದ ಅಂದಾಜು ಪಟ್ಟಿಗೆ 2012ರಲ್ಲಿಯೇ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿಯು ತಾಂತ್ರಿಕ ಅನುಮೋದನೆ ನೀಡಿತ್ತು. ನಗರಾಭಿವೃದ್ಧಿ ಇಲಾಖೆಯು 2014ರಲ್ಲಿ ಅನುಮೋದನೆ ನೀಡಿತ್ತು. 2015ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದು ₹ 5.6 ಕೋಟಿ ಮೊತ್ತದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಾಣ ಆಗಿದೆ.

ADVERTISEMENT

ಕ್ರೀಡಾ ಸಮುಚ್ಛಯದಲ್ಲೇನು?

ಬ್ಯಾಸ್ಕೆಟ್ ಬಾಲ್, ಈಜುಕೊಳ, ಟೆನಿಸ್, ಜಿಮ್, ಬ್ಯಾಡ್ಮಿಂಟನ್, ಟೆಬಲ್ ಟೆನಿಸ್, ಜಿಮ್ನ್ಯಾಸ್ಟಿಕ್ ಸೇರಿದಂತೆ ಹಲವು ಬಗೆಯ ಒಳಾಂಗಣ ಕ್ರೀಡಾ ಚಟುವಟಿಕೆಗಳು ನಡೆಯಲು ಕ್ರೀಡಾ ಸಮುಚ್ಚಯ ರೂಪಗೊಂಡಿದೆ. 460X50 ಅಡಿ ಅಗಲ ಮತ್ತು 23000 ಚದರ ಅಡಿ ವಿಸ್ತೀರ್ಣದಲ್ಲಿ ಈ ಸಮುಚ್ಚಯದಲ್ಲಿ ಅತ್ಯಾಧುನಿಕ ರೀತಿಯ ಕ್ರೀಡಾ ಸೌಕರ್ಯ, ತರಬೇತಿ ಕಲ್ಪಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

₹4.5 ಕೋಟಿಮೂಲ ಅಂದಾಜು ವೆಚ್ಚ

5.6 ಕೋಟಿಪರಿಷ್ಕೃತ ಅಂದಾಜು ಯೋಜನೆ

23 ಸಾವಿರ ಚದರ ಅಡಿ ಸಮುಚ್ಚಯದ ವಿಸ್ತೀರ್ಣ

2015 ಟೆಂಡರ್‌ ಪ್ರಕ್ರಿಯೆ ನಡೆದ ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.