ADVERTISEMENT

ಇಂದು ವಿಶ್ವ ಹಲಸು ದಿನ | ತುಮಕೂರು ಹಲಸಿಗೆ ಬೇಡಿಕೆ

ಸ್ಥಳೀಯವಾಗಿ ಬಳಕೆ ಕಡಿಮೆ: ವಿವಿಧ ಖಾದ್ಯ ತಯಾರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 7:44 IST
Last Updated 4 ಜುಲೈ 2025, 7:44 IST
ಹಲಸಿನ ಖಾದ್ಯ 
ಹಲಸಿನ ಖಾದ್ಯ    

ತೋವಿನಕೆರೆ: ಪ್ರತಿ ವರ್ಷ ಜುಲೈ 4ರಂದು ‘ವಿಶ್ವ ಹಲಸಿನ ದಿನ’ ಅಚರಿಸಲಾಗುತ್ತದೆ. ಆದರೆ ದೇಶದ ಹಲವು ರಾಜ್ಯಗಳಿಗೆ ಹಲಸಿನ ಹಣ್ಣನ್ನು ರವಾನಿಸುವ ತುಮಕೂರು ಜಿಲ್ಲೆಯ ಬೆಳೆಗಾರರಿಗೆ ಇದರ ಅರಿವು ಕಡಿಮೆ.

ಚೇಳೂರು ಹಲಸಿನ ಮಾರುಕಟ್ಟೆ ದೇಶದ ಗಮನ ಸೆಳೆಯುತ್ತದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಹಲಸಿನ ಮೇಳ, ಹಬ್ಬಗಳು ನಡೆದಿವೆ. ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದವರು ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಏರ್ಪಡಿಸಿದ್ದ ಹಲಸಿನ ಮಾರಾಟ ಮೇಳ ಬಿಟ್ಟರೆ ಈ ವರ್ಷ ಹಲಸಿಗೆ ಸಂಬಂಧಿಸಿದಂತೆ ಯಾವ ಚಟುವಟಿಕೆಯೂ ನಡೆಯಲಿಲ್ಲ.

ಕೆಲವು ರೈತ ಪರ ಸಂಘಟನೆಗಳಿಗೆ ಹಲಸಿನ ಮೇಳ ನಡೆಸುವ ಆಸಕ್ತಿಯಿದ್ದರೂ ಕಟ್ಟಡ, ಜಾಗಗಳಿಗೆ ಬಾಡಿಗೆ ಸೇರಿದಂತೆ ಇತರೆ ಖರ್ಚುಗಳಿಗೆ ಹಣದ ಕೊರತೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಚೇಳೂರು ಮಾರುಕಟ್ಟೆ ಹಣ್ಣುಗಳ ಮಾರಾಟದಲ್ಲಿ ದೇಶದ ಗಮನಸೆಳೆದಿದ್ದರೆ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶ ಎಳೆಯ ಕಾಯಿಗಳ ಮಾರಾಟದಲ್ಲಿ ಉತ್ತಮ ಹೆಸರುಗಳಿಸಿದೆ. ಪ್ರತಿ ವರ್ಷ 500 ಟನ್ ಎಳೆಯ ಕಾಯಿಗಳನ್ನು ಖರೀದಿ ಮಾಡಿ ಬೇರೆ ಕಡೆ ಕಳುಹಿಸುತ್ತಾರೆ.

ADVERTISEMENT

ಗ್ರಾಮದ ಮಹಿಳಾ ಸಂಘಟನೆಯೊಂದು ಹಲಸಿನ ಕಾಯಿ, ಹಣ್ಣು ಮತ್ತು ಬೀಜಗಳಿಂದ ಹಲವು ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲೆಯಿಂದ 10 ಸಾವಿರ ಹಲಸಿನ ಎಳೆಯ ಕಾಯಿ ಮತ್ತು ಹಣ್ಣುಗಳು ದೇಶದ ವಿವಿಧ ರಾಜ್ಯಗಳಿಗೆ ಮಾರಾಟವಾಗುತ್ತದೆ. ಅದರೆ ಇದುವರೆಗೂ ಒಂದೂ ಹಲಸಿನ ಖಾದ್ಯಗಳ ಮೇಳ ನಡೆದಿಲ್ಲ.ಮೋಹನ  ಹಲಸಿನ ಖಾದ್ಯ ತಯಾರಕ ಮಾರಾಟಗಾರ ಬೀರಸಂದ್ರ

ಹಲಸು 
ರಾಜ್ಯದ ನಾಲ್ಕು ಹಲಸು ಮೇಳಗಳಲ್ಲಿ ಹಣ್ಣು ಖಾದ್ಯ ಮಾರಾಟ ಮಾಡಿದ್ದೇವೆ. ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಿದೆ. ತೆಗೆದುಕೊಂಡು ಹೋದ ಎರಡು ಗಂಟೆಯಲ್ಲಿ ಖಾಲಿಯಾಗಿದೆ. ಭವಿಷ್ಯದಲ್ಲಿ ಹಲಸಿಗೆ ಉತ್ತಮ ಬೇಡಿಕೆ ಇದೆ.
ಮೋಹನ  ಹಲಸಿನ ಖಾದ್ಯ ತಯಾರಕ ಮಾರಾಟಗಾರ ಬೀರಸಂದ್ರ
ಹಲಸಿನ ಹಣ್ಣಿನ ಒಬ್ಬಟು ಹಲ್ವ  ಕೆತ್ತಕಾಯಿ ಸಾರು ಕಡಬು ಚಿಪ್ಸ್ ಪಕೋಡ ಹಲಸಿನ ಬೀಜದ ಲಡ್ಡು ಒಬ್ಬಟು ಮಾಡುತ್ತೇವೆ. ಮೇಳಗಳಲ್ಲಿ ಭಾಗವಹಿಸುತ್ತೇವೆ.
ಲತಾಮಣಿ ಗಡಬನಹಳ್ಳಿ ತಿಪಟೂರು

60 ಟನ್‌ ಮಾರಾಟ ಹಲಸಿನ ಹಣ್ಣನ್ನು ಪುಣೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಮಾರುಕಟ್ಟೆಯಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದೇವೆ. ಇಲ್ಲಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ.  ಒಳ್ಳೆಯ ಲಾಭವೂ ಸಿಕ್ಕಿದೆ. ಒಂದು ಸಲ ಹೋಗಿ ಮಾರಾಟ ಮಾಡಿ ಬರಲು 8ರಿಂದ 10 ದಿನ ಬೇಕಾಗುತ್ತದೆ. ಈ ವರ್ಷ ಪುಣೆ ಹಿಂದೂಪುರದಲ್ಲಿ 60 ಟನ್ ಮಾರಾಟ ಮಾಡಿದ್ದೇವೆ. ಮುಬಾರಕ್ ಹಲಸು ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.