
ತುಮಕೂರು: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಕದಂಬ ಕನ್ನಡಿಗ’ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. ಮುಖಂಡರಾದ ತನುಜ್‌ಕುಮಾರ್, ಮಂಜುನಾಥ್, ಟಿ.ವಿ.ಮನೋಜ್‍ಕುಮಾರ್, ಟಿ.ಇ.ರಘುರಾಮ್, ಬಾಳಾರಾಧ್ಯ, ಯಾಸ್ಮೀನ್ ತಾಜ್, ಗಿರೀಶ್, ವಿಷ್ಣುವರ್ಧನ್, ರಾಧಮ್ಮ, ಗಾಯತ್ರಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಒಕ್ಕೂಟದ ಗೌರವಾಧ್ಯಕ್ಷ ಎಚ್.ಎನ್.ದೀಪಕ್ ಮಾತನಾಡಿ, ‘ಜಿಲ್ಲಾ ಆಡಳಿತ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನದ ವೇಳೆ ಪ್ರಮಾಣ ಪತ್ರದ ಬದಲು, ರಾಜ್ಯೋತ್ಸವ ಸಮಾರಂಭದಲ್ಲಿ ಗೌರವಿಸಲಾಯಿತು ಎನ್ನುವ ಪತ್ರ ನೀಡಿರುವುದು ಸರಿಯಲ್ಲ. ಅಧಿಕೃತವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್, ಕೆಎಸ್‍ಆರ್‌ಪಿಯ ಅಜುಂ ಹುಸೇನ್, ಮುಖಂಡರಾದ ಎಸ್.ಪಿ.ಚಿದಾನಂದ್, ರಂಜನ್, ರಂಗಸ್ವಾಮಿ, ಚಕ್ರವರ್ತಿ ಪ್ರಕಾಶ್, ಅರುಣ್ ಕೃಷ್ಣಯ್ಯ, ಅರುಣ್‌ಕುಮಾರ್, ಅನಿಲ್ ನಾಯಕ್, ಉಪ್ಪಾರಹಳ್ಳಿ ಕುಮಾರ್, ಟಿ.ಆರ್.ಸದಾಶಿವಯ್ಯ, ಲಕ್ಷ್ಮಿನಾರಾಯಣ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.