ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ ‘ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ’ ವಿಷಯ ಕುರಿತು ಇಲ್ಲಿ ಜುಲೈ 27ರಂದು ರಾಜ್ಯ ಮಟ್ಟದ ಸಾಹಿತ್ಯ ಸಂವಾದ ಆಯೋಜಿಸಿದೆ.
ದಲಿತ ಚಳವಳಿ, ಮಹಿಳಾ ಚಳವಳಿ, ಕನ್ನಡ ಚಳವಳಿ ಹಾಗೂ ರೈತ, ಕಾರ್ಮಿಕ ಚಳವಳಿಯ ಆಶಯಗಳು ಅಭಿವ್ಯಕ್ತಗೊಂಡ ವಿಧಾನವನ್ನು ಚರ್ಚಿಸಲಾಗುತ್ತದೆ. ಪ್ರತಿ ಗೋಷ್ಠಿಯಲ್ಲಿ ವಿಷಯ ಮಂಡನೆ ಬಳಿಕ ಸಂವಾದಕ್ಕೆ ಸಮಯ ನೀಡುವುದು ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳ ವಿದ್ವಾಂಸರು ವಿಷಯ ಮಂಡಿಸುವರು. ಚಳವಳಿ ಪ್ರಜ್ಞೆಯನ್ನು ತಾತ್ವಿಕ ನೆಲೆಯಲ್ಲಿ ಜಾಗೃತವಾಗಿಸಲು ಸಂವಾದ ಏರ್ಪಡಿಸಿದೆ. ಈ ವರ್ಷ ಕೆಲ ಜಿಲ್ಲೆಗಳಲ್ಲಿ ರಚನಾತ್ಮಕ ಚಳವಳಿ ಕೇಂದ್ರಿತ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದಿದ್ದಾರೆ.
ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಕಾವ್ಯ ಗಾಯನದ ಮೂಲಕ ಜುಲೈ 27ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಆಸಕ್ತರು ವಿವರಗಳಿಗೆ ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಸಂಚಾಲಕರಾದ ನಾಗಭೂಷಣ್ (ಮೊಬೈಲ್ 9964852518) ಇಲ್ಲವೇ ಓ.ನಾಗರಾಜ್ (ಮೊಬೈಲ್ 9448659646) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.