ADVERTISEMENT

ಕೊಡಿಗೇನಹಳ್ಳಿ: ಅಗ್ನಿ ಬನ್ನಿರಾಯ ಜಯಂತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 5:59 IST
Last Updated 29 ಮಾರ್ಚ್ 2023, 5:59 IST
ಕೊಡಿಗೇನಹಳ್ಳಿಯಲ್ಲಿ ಮಂಗಳವಾರ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಅಂಗವಾಗಿ ಅಗ್ನಿ ಬನ್ನಿರಾಯ ಭಾವಚಿತ್ರದ ಮೆರವಣಿಗೆ ನಡೆಯಿತು
ಕೊಡಿಗೇನಹಳ್ಳಿಯಲ್ಲಿ ಮಂಗಳವಾರ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿ ಅಂಗವಾಗಿ ಅಗ್ನಿ ಬನ್ನಿರಾಯ ಭಾವಚಿತ್ರದ ಮೆರವಣಿಗೆ ನಡೆಯಿತು   

ಕೊಡಿಗೇನಹಳ್ಳಿ: ಗ್ರಾಮದಲ್ಲಿ ಮಂಗಳವಾರ ತಿಗಳ ಸಮುದಾಯದ ಮೂಲ ಪುರುಷ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿಯನ್ನು ಸಮುದಾಯದವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಜೃಂಭಣೆಯಿಂದ
ಆಚರಿಸಿದರು.

ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ದಿಂದ ವಿವಿಧ ಹೂವುಗಳಿಂದ ಅಲಂಕರಿಸಿದ್ದ ಅಗ್ನಿ ಬನ್ನಿರಾಯ ಮೂರ್ತಿಯನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕಳಶ ಹೊತ್ತು ಸಾಗಿದರು. ಯುವಕರು ಡಿಜೆ ಸಂಗೀತಕ್ಕೆ ಕುಣಿದು
ಕುಪ್ಪಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ವಿ. ಮಂಜುನಾಥ್ ಮಾತನಾಡಿದರು.

ADVERTISEMENT

ಸಮುದಾಯದ ಯಜಮಾನರಾದ ಡಿ.ಕೆ ವೆಂಕಟೇಶ್, ಮುದರೆ ಸಿದ್ದಪ್ಪ, ಅಣೆಕಾರ್ ದೊಡ್ಡವೀರಪ್ಪ, ಕೆ.ಜಿ. ಶ್ರೀನಿವಾಸ್, ಶಿವಲಿಂಗಯ್ಯ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.