ADVERTISEMENT

ಕಾಳೇನಹಳ್ಳಿ: ಹೂವಿನ ರಥೋತ್ಸವದಲ್ಲಿ ಮನಸೆಳೆದ ಚಕ್ಕೆಭಜನೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 14:30 IST
Last Updated 1 ಮೇ 2025, 14:30 IST
<div class="paragraphs"><p>ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಹೂವಿನ ರಥೋತ್ಸವದಲ್ಲಿ ಚಕ್ಕೆಭಜನೆ ವೀಕ್ಷಿಸಲು ಸೇರಿದ್ದ ಜನ</p></div>

ಕೊಡಿಗೇನಹಳ್ಳಿ ಹೋಬಳಿ ಕಾಳೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಹೂವಿನ ರಥೋತ್ಸವದಲ್ಲಿ ಚಕ್ಕೆಭಜನೆ ವೀಕ್ಷಿಸಲು ಸೇರಿದ್ದ ಜನ

   

ಕೊಡಿಗೇನಹಳ್ಳಿ: ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಅದ್ದೂರಿಯಾಗಿ ನಡೆದ ಶ್ರೀರಾಮದೇವರ ಹೂವಿನ ರಥೋತ್ಸವದಲ್ಲಿ ಚಕ್ಕೆಭಜನೆ ನೋಡುಗರ ಮನಸೆಳೆಯಿತು.

ಗ್ರಾಮದ ಪ್ರಮುಖ ರಸ್ತೆ ಮತ್ತು ಬೀದಿಗಳಲ್ಲಿ ಕಂಗೊಳಿಸುತ್ತಿದ್ದ ವಿದ್ಯುತ್ ದೀಪಾಲಂಕಾರದ ನಡುವೆ ಮಲ್ಲಿಗೆ ಹೂವುಗಳಿಂದ ಅಲಂಕರಿಸಿದ್ದ ತೇರು ಘಮ್ಮೆನ್ನುವುದರ ಜೊತೆಗೆ ಸುಂದರವಾಗಿ ಕಂಗೊಳಿಸುತ್ತಿತ್ತು. ಇದರ ನಡುವೆ ಮಕ್ಕಳಿಂದ ನಡೆಯುವ ಚಕ್ಕೆಭಜನೆ ನೃತ್ಯ ದೊಡ್ಡವರು, ಚಿಕ್ಕವರೆನ್ನದೆ ಎಲ್ಲರನ್ನು ಸೆಳೆಯಿತು.

ADVERTISEMENT

ರಾತ್ರಿ 1.30ಕ್ಕೆ ಆಂಜನೇಯ, ಮಹೇಶ್ವರಿದೇವಿ ಹಾಗೂ ಶ್ರೀರಾಮದೇವರಿಗೆ ಪೂಜೆ ನಂತರ ತೇರು ಎಳೆಯಲಾಯಿತು. ಜನರಿಂದ ಹರ್ಷೋದ್ಗಾರ ಮೊಳಗಿತು. ವರ್ಷಕ್ಕೊಮ್ಮೆ ಅದ್ದೂರಿಯಾಗಿ ನಡೆಯುವ ಈ ತೇರನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಜನರ ಜೊತೆಗೆ ದೂರದ ಗ್ರಾಮಗಳಿಂದಲೂ ಜನರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.