ADVERTISEMENT

ವಿಷಪೂರಿತ ನೀರು ಕುಡಿದು ಮೂರು ಮೇಕೆ ಸಾವು

​ಪ್ರಜಾವಾಣಿ ವಾರ್ತೆ
Published 5 ಮೇ 2019, 13:54 IST
Last Updated 5 ಮೇ 2019, 13:54 IST
ಕೋರ ಹೋಬಳಿ ಸಮೀಪವಿರುವ ರಾಮಗೊಂಡನಹಳ್ಳಿ ಬಳಿ ವಿಷಪೂರಿತ ನೀರು ಕುಡಿದು ಸಾವನ್ನಪ್ಪಿರುವ ಮೇಕೆಗಳು
ಕೋರ ಹೋಬಳಿ ಸಮೀಪವಿರುವ ರಾಮಗೊಂಡನಹಳ್ಳಿ ಬಳಿ ವಿಷಪೂರಿತ ನೀರು ಕುಡಿದು ಸಾವನ್ನಪ್ಪಿರುವ ಮೇಕೆಗಳು   

ಕೋರ: ಹೋಬಳಿ ಸಮೀಪವಿರುವ ರಾಮಗೊಂಡನಹಳ್ಳಿ ಬಳಿ ವಿಷಪೂರಿತ ನೀರು ಕುಡಿದು ಮೂರು ಮೇಕೆಗಳು ಭಾನುವಾರ ಸಾವನ್ನಪ್ಪಿವೆ.

ರಾಮಗೊಂಡನಹಳ್ಳಿಯ ಹುಲಿಯಪ್ಪ ಎಂಬುವವರು ಮೇಕೆಗಳನ್ನು ಮೇಯಿಸಲು ತೆರಳಿದ್ದರು. ಆ ವೇಳೆ ಹಿರೇಗುಂಡಗಲ್ ಬಳಿ ಇರುವ ತೋಟದಲ್ಲಿ ನೀರು ಕುಡಿದ 6 ಮೇಕೆಗಳ ಪೈಕಿ ಮೂರು ಸ್ಥಳದಲ್ಲೇ ಮೃತಪಟ್ಟಿವೆ. ಮೂರು ಮೇಕೆಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿವೆ.

ಸ್ಥತಳಕ್ಕೆ ರಾಮಗೊಂಡನಹಳ್ಳಿ ಪಶುವೈದ್ಯಾಧಿಕಾರಿ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.