ADVERTISEMENT

ಕೊರಟಗೆರೆ: ಶೇ 2ರಷ್ಟು ಚೇತರಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:25 IST
Last Updated 2 ಮೇ 2025, 14:25 IST
ಆದಿಲ್ ಲಾಲ್‌ಸಾಬ್ ರಾಮ್‌ದುರ್ಗ
ಆದಿಲ್ ಲಾಲ್‌ಸಾಬ್ ರಾಮ್‌ದುರ್ಗ   

ಕೊರಟಗೆರೆ: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊರಟಗೆರೆ ಶೇ 64.79ರಷ್ಟು ಫಲಿತಾಂಶ ಪಡೆದು, ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಕಳೆದ ವರ್ಷ ಶೇ 62ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ ಶೇ 2ರಷ್ಟು ಚೇತರಿಕೆಯಾಗಿದೆ.

ಪಟ್ಟಣದ ಚಾಣಕ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಆದಿಲ್ ಲಾಲ್ ಸಾಬ್ ರಾಮ್‌ದುರ್ಗ 625ಕ್ಕೆ 621 (ಶೇ 99.36) ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರವೀಂದ್ರಭಾರತಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಎಂ.ಎನ್.ಸೃಜನ್ 618 (ಶೇ 98.88) ಹಾಗೂ ಪಿ. ಸುಹಾಸ್ 618 (ಶೇ 98.88) ದ್ವಿತೀಯ ಸ್ಥಾನ, ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಎ.ವೇಣು 617 (ಶೇ 97.72) ಹಾಗೂ ರವೀಂದ್ರಭಾರತಿ ಪ್ರೌಢಶಾಲೆಯ ಜಿ.ಎಚ್.ಅಮೂಲ್ಯ 617 (ಶೇ 97.72) ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಬಿಇಒ ಸಿ.ವಿ.ನಟರಾಜು ಮಾಹಿತಿ ನೀಡಿದರು.

ADVERTISEMENT
ಎಂ.ಎನ್.ಸೃಜನ್
ಪಿ.ಸುಹಾಸ್
ಎ.ವೇಣು
ಅಮೂಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.