ADVERTISEMENT

ಕೊರಟಗೆರೆ: ಸ್ವಯಂ ಪ್ರೇರಿತ ಲಾಕ್‌ಡೌನ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:35 IST
Last Updated 30 ಜೂನ್ 2020, 9:35 IST

ಕೊರಟಗೆರೆ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜೂನ್ 30ರಿಂದ ಕೊರಟಗೆರೆ ಪಟ್ಟಣದಲ್ಲಿ ಜನತಾ ಕರ್ಫ್ಯೂ ನಡೆಸುವುದಾಗಿ ಸಾರ್ವಜನಿಕರು ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಿದರು.

ತಾಲ್ಲೂಕಿನಲ್ಲಿ ಒಂದು ವಾರದಲ್ಲಿ ಮೂರು ಕೊರೊನಾ ಸೋಂಕು ಪ್ರಕರಣ ಕಂಡು ಬಂದ ಕಾರಣ ವರ್ತಕರು, ಹೋಟೆಲ್ ಮಾಲೀಕರು, ಬಟ್ಟೆ ವ್ಯಾಪಾರಿಗಳು, ಹಣ್ಣು- ತರಕಾರಿ ವ್ಯಾಪಾರಿಗಳು, ಚಿನ್ನ, ಬೆಳ್ಳಿ ವ್ಯಾಪಾರಿಗಳು ಸಭೆ ಸೇರಿದ್ದರು. ಪ್ರತಿ ದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಎಲ್ಲ ರೀತಿಯ ವಹಿವಾಟುಗಳು ನಡೆಯಲಿದ್ದು, ಆನಂತರ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ, ಆರೋಗ್ಯ ನಿರೀಕ್ಷಕ ರೈಸ್ ಅಹಮದ್, ಸದಸ್ಯರಾದ ಕೆ.ಆರ್.ಓಬಳರಾಜು, ನಾಗರಾಜು, ಪ್ರದೀಪ್, ನರಸಿಂಹಪ್ಪ, ಪುಟ್ಟನರಸಪ್ಪ, ಮುಖಂಡರಾದ ರಮೇಶ್, ಗಣೇಶ್, ಶ್ರೀನಿವಾಸ್, ತುಂಗಾಮಂಜು, ಧರ್ಮಣ್ಣ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.