ADVERTISEMENT

ಇಳಿಯುವ ಮೊದಲೇ ಬಸ್ ಚಾಲನೆ: ಮಗಳ ಮನೆಯಲ್ಲಿ ಹಬ್ಬ ಮುಗಿಸಿ ಮರಳಿದ್ದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 7:48 IST
Last Updated 27 ಸೆಪ್ಟೆಂಬರ್ 2025, 7:48 IST
   

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಮಾರಗೊಂಡನಹಳ್ಳಿ ಗ್ರಾಮದ ಬಳಿ ಶನಿವಾರ ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಕಾಮಕ್ಕ (64) ಎಂಬುವರು ಮೃತಪಟ್ಟಿದ್ದಾರೆ.

ಗುಡ್ಡದಜೋಗಿಹಳ್ಳಿ ಗ್ರಾಮದ ಕಾಮಕ್ಕ ಕರೆಮಾದೇನಹಳ್ಳಿ ಗ್ರಾಮದಲ್ಲಿದ್ದ ತನ್ನ ಮಗಳ ಮನೆಗೆ ಹಬ್ಬಕ್ಕಾಗಿ ಬಂದಿದ್ದರು. ಹಬ್ಬ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಮಾರಗೊಂಡನಹಳ್ಳಿ ಬಳಿ ಇಳಿಯುವುದಕ್ಕೂ ಮೊದಲೇ ಚಾಲಕ ಬಸ್‌ ಚಲಾಯಿಸಿಕೊಂಡು ಹೋಗಿದ್ದಾರೆ.

ಕಾಮಕ್ಕ ಆಯತಪ್ಪಿ ಬಸ್‌ನಿಂದ ಕೆಳಗೆ ಬಿದ್ದಿದ್ದು, ಬಸ್‌ನ ಹಿಂದಿನ ಚಕ್ರ ದೇಹದ ಮೇಲೆ ಹರಿದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.