ADVERTISEMENT

ಕುಣಿಗಲ್‌ಗೆ ಹೇಮಾವತಿ ಹರಿಯದಿದ್ದರೆ ತಮಟೆ ಚಳವಳಿ: ಜೆಡಿಎಸ್‌ ಮುಖಂಡರ ಎಚ್ಚರಿಕೆ

ಕುಣಿಗಲ್: ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಬಿ.ಎನ್.ಜಗದೀಶ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 10:49 IST
Last Updated 17 ನವೆಂಬರ್ 2019, 10:49 IST
   

ಕುಣಿಗಲ್: ನವೆಂಬರ್ 18ರೊಳಗೆ ತಾಲ್ಲೂಕಿಗೆ ಹೇಮಾವತಿ ನೀರು ಹರಿಯದಿದ್ದರೆ ಸರ್ಕಾರದ ಗಮನ ಸೆಳೆಯಲು ತಮಟೆ ಚಳವಳಿ ನಡೆಸುವುದಾಗಿರಾಜ್ಯ ಯುವ ಜೆಡಿಎಸ್ ಪ್ರದಾನ ಕಾರ್ಯದರ್ಶಿ ಬಿ.ಎನ್.ಜಗದೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಹೇಮಾವತಿ ನೀರು ಬಂದರೂ, ಕುಣಿಗಲ್ ತಾಲ್ಲೂಕಿಗೆ ನೀರು ಹರಿಸುವಲ್ಲಿ ವಿಫಲರಾದ ಶಾಸಕ ಡಾ ರಂನಾಥ್ ಕೇವಲ ಪ್ರಚಾರಪ್ರಿಯ ಮತ್ತು ಗಿಮಿಕ್ ರಾಜಕಾರಣಿ ಎಂದು ಆರೋಪಿಸಿದ್ದಾರೆ.

ಕಳೆದ ಆಗಸ್ಟ್ 19ರಿಂದ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿದು ಬರುತ್ತಿದೆ. ಶಾಸಕರು ಪ್ರತಿಭಟನೆಯ ಗಿಮಿಕ್ ನಡೆಸಿದ ನಂತರ ಮೊದಲು ಹಂತದಲ್ಲಿ ಕೇವಲ ಹತ್ತು ದಿನಗಳು ಮಾತ್ರ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಯಿತು, ನಂತರ ದಿನಗಳಲ್ಲಿ ಹರಿಯಲಿಲ್ಲ ಎಂದರು.

ADVERTISEMENT

ಗೋಷ್ಠಿಯಲ್ಲಿ ಬೆನವಾರ ಶೇಷಣ್ಣ, ನಾಗರಾಜು, ಮೂರ್ತಿ,ಗಿರಿ ಎಡೆಯೂರು ದೀಪು, ತರಿಕೆರೆ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.