ಕುಣಿಗಲ್: ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದರೂ, ಅರಣ್ಯ ಇಲಾಖೆ ಇಡುತ್ತಿರುವ ಬೋನಿಗೆ ಬೀಳುತ್ತಿರುವ ಚಿರತೆಗಳು ಹೆಚ್ಚಾಗುತ್ತಿದೆ.
ಸೋಮವಾರ ಬೆಳಗಿನ ಜಾವ ಯಡೆಯೂರು ಹೋಬಳಿಯ ನಡೆಮಾವಿನಪುರದ ನಂಜೇಗೌಡರವರ ತೋಟದಲ್ಲಿಟ್ಟಿದ ಬೋನಿಗೆ 5ವರ್ಷದ ಗಂಡು ಚಿರತೆ ಬಿದ್ದರೆ, ಮಂಗಳವಾರ ಬೆಳಗಿನ ಜಾವ ಯಡೆಯೂರು ಹೋಬಳಿಯ ಹುಲಿವಾನ ಗ್ರಾಮದ ನಂಜಪ್ಪನವರ ಜಮೀನಿನಲ್ಲಿಟ್ಟದ ಬೋನಿಗೆ 6 ವರ್ಷದ ಗಂಡು ಚಿರತೆ ಬಿದ್ದಿದೆ.
2021ರಲ್ಲಿ ಇದುವರೆಗೂ 14 ಚಿರತೆಗಳು ಬೋನಿಗೆ ಬಿದ್ದಿದೆ. ಎರಡು ಚಿರತೆಗಳು ಅಪರಿಚಿತ ವಾಹನಗಳು ಡಿಕ್ಕಿ ಹೊಡೆದು ಮೃತಪಟ್ಟಿವೆ ಎಂದು ತಿಳಿಸಿರುವ ವಲಯ ಅರಣ್ಯಾಧಿಕಾರಿ ಮಂಜುನಾಥ್, ಕುಣಿಗಲ್ ವಲಯದಲ್ಲಿ ಮೊದಲಿಗೆ ಆರು ಬೋನುಗಳ ಲಭ್ಯತೆ ಇದ್ದರೇ ಪ್ರಸ್ತುತಾ 17 ಬೋನುಗಳು ಇದ್ದು ಚಿರತೆ ಹಾವಳಿಯ ಪ್ರದೇಶಗಳಿಂದ ಗ್ರಾಮಸ್ಥರಿಂದ ಬರುವ ಮನವಿಗೆ ಸ್ಪಂದಿಸಿ ಬೋನುಗಳನ್ನು ಇಟ್ಟು ಚಿರತೆಗಳನ್ನು ಹಿಡಿದು ಸಂರಕ್ಷಿಕ ಅರಣ್ಯಗಳಿಗೆ ರವಾನಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಅಂದಾಜು ಇನ್ನು 40ಕ್ಕೂ ಹೆಚ್ಚು ಚಿರತೆಗಳು ಇರಬಹುದು. ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.