ತುರುವೇಕೆರೆ: ತಾಲ್ಲೂಕಿನ ತಂಡಗ ಸಮೀಪದ ವಡೇರಹಳ್ಳಿಯ ಕುಮಾರ್‌ಗೆ ಸೇರಿದ 10 ಕತ್ತೆಗಳನ್ನು ಮಂಗಳವಾರ ರಾತ್ರಿ ಚಿರತೆ ದಾಳಿ ಮಾಡಿ ಕೊಂದಿದೆ.
ಮೂರ್ನಾಲ್ಕು ದಿನಗಳ ಹಿಂದೆ ಕುಮಾರ್ ಅವರು ಶಿಕ್ಷಕ ಶಿವಣ್ಣ ಅವರ ತೋಟದಲ್ಲಿ ಕತ್ತೆಗಳನ್ನು ಕಟ್ಟಿದ್ದರು. ಚಿರತೆ ಮೊನ್ನೆ ರಾತ್ರಿ ಮೂರು ಕತ್ತೆಗಳ ಮೇಲೆ ದಾಳಿ ಮಾಡಿ ಸಾಯಿಸಿತ್ತು. ಮಂಗಳವಾರ ರಾತ್ರಿ ಮತ್ತೆ ಶಿಕ್ಷಕ ಶಿವಣ್ಣ ನವರ ತೋಟದಲ್ಲಿ ಕಟ್ಟಿಹಾಕಿದ್ದ ಕತ್ತೆಗಳ ಮೇಲೆ ದಾಳಿ ಮಾಡಿ ಏಳು ಕತ್ತೆಗಳನ್ನು ಕೊಂದಿದೆ.
ಕತ್ತೆಗಳನ್ನು ಬಾಡಿಗೆ ಆಧಾರದಲ್ಲಿ ಜಮೀನುಗಳಲ್ಲಿ ಬಿಟ್ಟು ಜೀವನ ಸಾಗಿಸುತ್ತಿದ್ದ ಕುಮಾರ್‌ಗೆ ಚಿರತೆ ಕಾಟದಿಂದಾಗಿ ಕತ್ತೆಯನ್ನು ಸಾಕಲು ಭಯವಾಗುತ್ತಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಪಶುವೈದ್ಯರ ಡಾ.ಚಂದ್ರಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.