ADVERTISEMENT

ಟಾರ್ಪಲ್‌ಗಾಗಿ ಬೆಳಗ್ಗೆಯಿಂದಲೇ ಸಾಲು

ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಕೊರೊನಾ ಲೆಕ್ಕಿಸದೆ ಗುಂಪು ಸೇರಿದ ರೈತರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:53 IST
Last Updated 18 ಜೂನ್ 2021, 4:53 IST
ಹಂದನಕೆರೆ ರೈತ ಸಂಪರ್ಕ ಕೇಂದ್ರದ ಮುಂದೆ ಟಾರ್ಪಲ್‌ಗಾಗಿ ನಿಂತಿದ್ದ ರೈತರು
ಹಂದನಕೆರೆ ರೈತ ಸಂಪರ್ಕ ಕೇಂದ್ರದ ಮುಂದೆ ಟಾರ್ಪಲ್‌ಗಾಗಿ ನಿಂತಿದ್ದ ರೈತರು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಹಾಗೂ ಕಂದಿಕೆರೆ ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಲ್‌ಗಾಗಿ ಬೆಳಗ್ಗೆ 7 ಗಂಟೆಯಿಂದಲೇ ರೈತರು ಕೋವಿಡ್‌ ಮಾರ್ಗಸೂಚಿ ಮರೆತು ಸಾಲಿನಲ್ಲಿ ನಿಂತಿದ್ದರು.

ಕಳೆದ ಎರಡು ದಿನಗಳಿಂದಲೂ ತಾಲ್ಲೂಕಿನ ಹೋಬಳಿಗಳ ರೈತಸಂಪರ್ಕ ಕೇಂದ್ರಗಳಲ್ಲಿ ಟಾರ್ಪಲ್ ವಿತರಣೆ ಮಾಡಲಾಗುತ್ತಿತ್ತು. ಗುರುವಾರ ಕೂಡ ವಿತರಣೆ ಮುಂದುವರೆದಿದ್ದು
ಕಂದಿಕೆರೆ ಹಾಗೂ ಹಂದನಕೆರೆ
ರೈತ ಸಂಪರ್ಕ ಕೇಂದ್ರಗಳು ಬಾಗಿಲು ತೆಗೆಯುವ ಮುಂಚೆಯೇ ಕಾದು ನಿಂತಿದ್ದರು. ಟಾರ್ಪಲ್‌ಗಿಂತ ಸರದಿ ಸಾಲಿನ ರೈತರ ಸಂಖ್ಯೆ ಹೆಚ್ಚಿದ್ದು,
ರೈತರು ಟಾರ್ಪಲ್ ಸಿಗುವುದೊ, ಇಲ್ಲವೋ ಎಂಬ
ಧಾವಂತದಲ್ಲಿದ್ದರು.

ಈ ಬಾರಿ ರೈತರಿಗೆ ವಿತರಣೆ ಮಾಡುವ ಟಾರ್ಪಲ್‌ಗಳು ಮೂರರಷ್ಟು ಹೆಚ್ಚಿಸಲಾಗಿದೆ. ಪ್ರತಿ ರೈತ
ಸಂಪರ್ಕಗಳಿಗೆ 800ಕ್ಕೂ ಹೆಚ್ಚು ಟಾರ್ಪಲ್‌ಗಳು ಬಂದಿದ್ದು ರೈತರು
ಹೆಚ್ಚು ಇರುವ ರೈತ ಸಂಪರ್ಕ ಕೇಂದ್ರಗಳಲ್ಲಿ ಪೊಲೀಸರ ಸಮ್ಮುಖದಲ್ಲಿ ಟೋಕನ್‌ ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು
ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.