ADVERTISEMENT

ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 2:12 IST
Last Updated 20 ನವೆಂಬರ್ 2020, 2:12 IST

ಚಿಕ್ಕನಾಯಕನಹಳ್ಳಿ:ನ. 22ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಗವಿರಂಗಯ್ಯ ತಿಳಿಸಿದ್ದಾರೆ.

ಕೆ.ಬಿ. ಕ್ರಾಸ್ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ವಿದ್ಯುತ್ ಸರಬರಾಜಾಗುವ 110 ಕೆ.ವಿ ವಿದ್ಯುತ್ ಮಾರ್ಗದಲ್ಲಿ ಟವರ್ ನಿರ್ಮಾಣ ಹಾಗೂ ಲೈನ್ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಹಾಗಾಗಿ, ಚಿಕ್ಕನಾಯಕನಹಳ್ಳಿ, ಶೆಟ್ಟಿಕೆರೆ, ಹುಳಿಯಾರು, ಹಂದನಕೆರೆ, ತಿಮ್ಮನಹಳ್ಳಿ ಹಾಗೂ ಕಾತ್ರಿಕೆಹಾಳ್ ವಿದ್ಯುತ್ ಉಪಸ್ಥಾವರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT