ADVERTISEMENT

ತುಮಕೂರು: ಮಾವಿಗೆ ‘ಕಲ್ಪತರು’ ಬ್ರಾಂಡ್

​ಪ್ರಜಾವಾಣಿ ವಾರ್ತೆ
Published 20 ಮೇ 2020, 14:34 IST
Last Updated 20 ಮೇ 2020, 14:34 IST
‘ಮಾವು ಮೇಳ’ ಉದ್ಘಾಟಿಸಿದ ಸಚಿವ ಮಾಧುಸ್ವಾಮಿ. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ ಸಿಇಒ ಶುಭಾ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ, ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಗೌಡ, ಆಶ್ಟ್ರಿಚ್ ಕಂಪನಿ ವ್ಯವಸ್ಥಾಪಕ ನೀಲೇಶ್ ಇದ್ದರು

ತುಮಕೂರು: ಕೊರೊನಾ ಸಂಕಷ್ಟದ ಕಾರಣ ಜಿಲ್ಲೆಯ ಮಾವು ಬೆಳೆಗಾರರು ತಾವು ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದೆ ಇರುವುದನ್ನು ಗಮನಿಸಿ ‘ಕಲ್ಪತರು’ ಹೆಸರಿನ ಬ್ರಾಂಡ್ ಅಡಿ ತೋಟಗಾರಿಕೆ ಇಲಾಖೆ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ.

ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಮಾವು ಮೇಳ’ಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು.

ರೈತರು ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಸಣ್ಣ ಸಣ್ಣ ಮಾರುಕಟ್ಟೆಗಳ ಮೂಲಕ ಮಾರಾಟಮಾಡಿ ಲಾಭ ಗಳಿಸಬಹುದು. ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹಣ್ಣು ಸವಿಯಲು ಜನ ಹಿಂಜರಿಯುತ್ತಾರೆ. ನೈಸರ್ಗಿಕ ಮತ್ತು ಸಾಂಪ್ರದಾಯಿಕವಾಗಿ ಮಾಗಿಸಿದ ಹಣ್ಣುಗಳಿಗೆ ಬೇಡಿಕೆ ಇದೆ ಎಂದರು.

ADVERTISEMENT

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ರಘು, ‘ರೈತರು ಇಚ್ಛಿಸಿದರೆ ಮಾವಿನ ಕಾಯಿಯನ್ನು ನೈಸರ್ಗಿಕವಾಗಿ ಮಾಗಿಸಿ ಅಥವಾ ಇಥಲಿನ್ ಅನಿಲದಿಂದ ಮಾಗಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ತೋಟಗಾರಿಕೆ ಇಲಾಖೆಯು ಮಹಾನಗರ ಪಾಲಿಕೆಯಿಂದ ನಗರದ ವಿವಿಧ ವಾರ್ಡ್‍ಗಳಲ್ಲಿ ಮಾವು ಮಾರಾಟಕ್ಕೆ ಸ್ಥಳಗಳನ್ನು ಗುರುತಿಸಿದೆ. ಆಸಕ್ತ ರೈತರು ಸರ್ಕಾರೇತರ ಸಂಘ- ಸಂಸ್ಥೆಗಳು ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.