ADVERTISEMENT

ತುಮಕೂರು | ಮಣ್ಣಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:04 IST
Last Updated 19 ಮಾರ್ಚ್ 2023, 8:04 IST
ಚೇಳೂರು ಹೋಬಳಿಯ ಇತಿಹಾಸ ಪ್ರಸಿದ್ಧ ಮಣ್ಣಮ್ಮ ದೇವಿ ರಥೋತ್ಸವ ನಡೆಯಿತು
ಚೇಳೂರು ಹೋಬಳಿಯ ಇತಿಹಾಸ ಪ್ರಸಿದ್ಧ ಮಣ್ಣಮ್ಮ ದೇವಿ ರಥೋತ್ಸವ ನಡೆಯಿತು   

ಚೇಳೂರು: ಹೋಬಳಿಯ ಮಣ್ಣೆ ಮಾರಿ ಕಾವಲ್‌ನ ಇತಿಹಾಸ ಪ್ರಸಿದ್ಧ ಮಣ್ಣಮ್ಮ ಮತ್ತು ಮಾದಾಪುರದಮ್ಮ ದೇವಿಯ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಸುತ್ತಲಿನ 33 ಗ್ರಾಮಗಳ ಮನೆ ದೇವತೆಯಾದ ಮಣ್ಣಮ್ಮ ದೇವಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಾತ್ರಿಯಿಡೀ ದೇವಿಯ ದರ್ಶನ ಪಡೆದರು. ರಾತ್ರಿ 3 ಗಂಟೆ ಸಮಯದಲ್ಲಿ ಮಹಾರಥೋತ್ಸವ ನೆರವೇರಿತು.

ಇದೇ ಸಂದರ್ಭದಲ್ಲಿ ಅಗ್ನಿಕುಂಡ ನಡೆಯಿತು. ಸುಮಾರು 3 ವರ್ಷಗಳಿಂದ ಕೋವಿಡ್ ಭೀತಿಯಿಂದ ಸರಳವಾಗಿ ನಡೆದಿದ್ದ ಜಾತ್ರೆಯು ಈ ವರ್ಷ ಅದ್ದೂರಿಯಾಗಿ ನಡೆದಿದ್ದು ಭಕ್ತರು ಹರ್ಷ ವ್ಯಕ್ತಪಡಿಸಿದರು. ‌

ADVERTISEMENT

ರಥಕ್ಕೆ ಹೂವು, ದವನ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.