ADVERTISEMENT

ತಂತ್ರಜ್ಞಾನದೊಂದಿಗೆ ಕೌಶಲ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2024, 9:15 IST
Last Updated 14 ಮೇ 2024, 9:15 IST
ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ಗ್ರಾಜುಯೇಷನ್‍ಡೇ ಕಾರ್ಯಕ್ರಮ ಸೋಮವಾರ ನಡೆಯಿತು
ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ಗ್ರಾಜುಯೇಷನ್‍ಡೇ ಕಾರ್ಯಕ್ರಮ ಸೋಮವಾರ ನಡೆಯಿತು   

ತಿಪಟೂರು: ಯುವಜನತೆ ತಂತ್ರಜ್ಞಾನದೊಂದಿಗೆ ಕೌಶಲ ನವೀಕರಿಸಬೇಕು. ತಮ್ಮ ಗುರಿಯನ್ನು ಕೇವಲ ಹಣಗಳಿಸುವ ಉದ್ಯೋಗಕ್ಕಲ್ಲದೆ ಸದೃಡ ಸಮಾಜ ನಿರ್ಮಾಣಕ್ಕೆ ಅನುಕೂಲವಾಗಿರುವಂತೆ ಕಾರ್ಯ ನಿರ್ವಹಿಸಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಡೀನ್ ಪಿ.ಪರಮಶಿವಯ್ಯ ಹೇಳಿದರು.

ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಿಂದ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್‍ಡೇ ಉದ್ಘಾಟಿಸಿ ಮಾತನಾಡಿದರು.

ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್‍ಸಿಂಗ್‍ ಪ್ರಧಾನಿಯಾದ ಅವಧಿಯಲ್ಲಿ ಆರ್ಥಿಕ ಉದಾರೀಕರಣಕ್ಕೆ ಮುನ್ನುಡಿ ಬರೆದರು. ವಿದೇಶಿ ಹೂಡಿಕೆಗೆ ತೆರೆದುಕೊಳ್ಳುವಿಕೆ ಬಂಡವಾಳ ಮಾರುಕಟ್ಟೆ ಸುಧಾರಿಸುವುದು ದೇಶೀಯ ವ್ಯಾಪಾರ ನಿಯಂತ್ರಣ ನೀತಿ ಹೊರತಂದರು. ವಿದ್ಯಾರ್ಥಿಗಳು ಹಣವನ್ನು ನೀರಿನಂತೆ ಸಂಗ್ರಹಿಸಬೇಕು, ತೀರ್ಥದಂತೆ ಬಳಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಎಂ.ಆರ್.ಸಂಗಮೇಶ್, ಜಿ.ಪಿ.ದೀಪಕ್, ಜಿ.ಎಸ್.ಉಮಾಶಂಕರ್, ಜಿ.ಡಿ.ಗುರುಮೂರ್ತಿ, ದೀಪ್ತಿ ಅಮಿತ್, ಮಿಟ್ಟ ಶೇಖರಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.