ADVERTISEMENT

ಒಗ್ಗಟ್ಟಿನಿಂದ ಇದ್ದಲ್ಲಿ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ: ಜ್ಞಾನಾನಂದಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 14:16 IST
Last Updated 22 ಸೆಪ್ಟೆಂಬರ್ 2024, 14:16 IST
ಗುಬ್ಬಿಯಲ್ಲಿ ಅಗ್ನಿ ಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಸಭೆ ನಡೆಯಿತು
ಗುಬ್ಬಿಯಲ್ಲಿ ಅಗ್ನಿ ಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಸಭೆ ನಡೆಯಿತು   

ಗುಬ್ಬಿ: ಸದಸ್ಯರು ಒಗ್ಗಟ್ಟಿನಿಂದ ಇದ್ದಲ್ಲಿ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಸರ್ಪಮಠದ ಜ್ಞಾನಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲ್ಲೂಕು ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

ಸಂಘದಿಂದ ಬರುವ ಆದಾಯವನ್ನು ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳುವತ್ತ ಸದಸ್ಯರು ಗಮನಹರಿಸಬೇಕಿದೆ. ಸಂಘದ ಸದಸ್ಯರಲ್ಲಿ ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಸಂಘಗಳು ಅಭಿವೃದ್ಧಿಗೊಂಡು ಲಾಭಾಂಶ ಪಡೆಯಲು ಸಾಧ್ಯ ಎಂದರು.

ADVERTISEMENT

ಸಂಘದ ಅಧ್ಯಕ್ಷ ಹುಚ್ಚಪ್ಪ ಮಾತನಾಡಿ, ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಹೆಚ್ಚಿನ ಸಾಲ ವಿತರಣೆ ಸಾಧ್ಯ. ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಸಂಘದ ಬಲವರ್ಧನೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಕೆಲವೇ ಲಕ್ಷಗಳ ಮೂಲ ಬಂಡವಾಳದೊಂದಿಗೆ ಪ್ರಾರಂಭವಾಗಿದ್ದ ಸಂಘದ ವಹಿವಾಟು ಸದ್ಯ ₹2 ಕೋಟಿಗೂ ಅಧಿಕವಾಗಲು ಸಾಧ್ಯ. ವೈಯಕ್ತಿಕ ಸಾಲದ ಜೊತೆಗೆ ವಾಹನಗಳ ಸಾಲ ವಿತರಣೆ ಮಾಡಲಾಗುತ್ತಿದ್ದು, ಸದಸ್ಯರು ಇದರ ಸದುಪಯೋಗ ಪಡೆದುಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.

ಕಾರ್ಯದರ್ಶಿ ಜಿ.ಬಿ. ಮಲ್ಲಪ್ಪ ಹಾಗೂ ಹಿರಿಯ ನಿರ್ದೇಶಕ ನಂಜೇಗೌಡ ಮಾತನಾಡಿದರು.

ಮುಖಂಡರಾದ ಲೋಕೇಶ್ ಬಾಬು, ನಾಗರಾಜು, ವೆಂಕಟರಾಮಯ್ಯ, ಕರಿಗಿರಯ್ಯ, ಜುಂಜಯ್ಯ, ಹನುಮಯ್ಯ, ಹೇಮಲತಾ, ಬಸವರಾಜು, ರೇವಣ್ಣ, ನಾಗಣ್ಣ, ಕೃಷ್ಣಮೂರ್ತಿ, ಅರ್ಜುನಯ್ಯ, ಬಸವರಾಜು ಸಂಘದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.