ADVERTISEMENT

ಪಾವಗಡ: ಹಾಲು ಉತ್ಪಾದನೆ ಕುಂಠಿತ: ರೈತರಿಗೆ ಸಂಕಷ್ಟ

ಗಡಿ ಗ್ರಾಮದ ಜಾನುವಾರುಗಳಿಗೆ ಚರ್ಮಗಂಟು ಬಾಧೆ ಉಲ್ಬಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:31 IST
Last Updated 4 ನವೆಂಬರ್ 2020, 3:31 IST
ಪಾವಗಡ ತಾಲ್ಲೂಕು ಪಳವಳ್ಳಿ ಗ್ರಾಮದ ಹಸುವಿಗೆ ಚರ್ಮಗಂಟು ರೋಗ ತಗುಲಿದೆ
ಪಾವಗಡ ತಾಲ್ಲೂಕು ಪಳವಳ್ಳಿ ಗ್ರಾಮದ ಹಸುವಿಗೆ ಚರ್ಮಗಂಟು ರೋಗ ತಗುಲಿದೆ   

ಪಾವಗಡ: ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಹಸುಗಳಿಗೆ ಚರ್ಮಗಂಟು ರೋಗಬಾಧೆ ವ್ಯಾಪಕವಾದ ಕಾರಣ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿಯುತ್ತಿದೆ.

ಚರ್ಮಗಂಟು ರೋಗ ಕಾಣಿಸಿಕೊಂಡ ಜಾನುವಾರಗಳಿಂದ ವೈರಾಣು‌ ಸೋಂಕು ಅಕ್ಕಪಕ್ಕದ ಜಾನುವಾರುಗಳಿಗೂ ತ್ವರಿತಗತಿಯಲ್ಲಿ ಹಬ್ಬುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬೆಳವಣಿಗೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತರನ್ನು ಚಿಂತೆಗೀಡುಮಾಡಿದೆ.

ಆಂಧ್ರ ಗಡಿಯಲ್ಲಿರುವ ಪಳವಳ್ಳಿ, ವೆಂಕಟಮ್ಮನಹಳ್ಳಿ, ತಿರುಮಣಿ, ನಾಗಲಮಡಿಕೆ, ಬೊಮ್ಮತನಹಳ್ಳಿ, ಕೊಡಮಡುಗು ಸೇರಿದಂತೆ ಹಲವು ಗ್ರಾಮಗಳಲ್ಲಿಶುಷ್ಕ ವಾತಾವರಣದಿಂದ ಸೋಂಕು ವೇಗವಾಗಿ ಹರಡುತ್ತಿದೆ.

ADVERTISEMENT

ರೈತರು ರೋಗ ಕಾಣಿಸಿಕೊಂಡ ಆರಂಭದಲ್ಲಿಯೇ ಚಿಕಿತ್ಸೆ ಕೊಡಿಸಿದಲ್ಲಿ ರೋಗವನ್ನು ನಿಯಂತ್ರಿಸಬಹುದು. ಇಲ್ಲವಾದಲ್ಲಿ ಇಡೀ ಮೈ ಗಾಯಗಳಾಗಿ ಜಾನುವಾರುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಹಾಲು ಉತ್ಪಾದನೆಯ ಮೇಲೆಯೂ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಪಶು ಇಲಾಖೆ ವೈದ್ಯರು.

‘ವೈರಸ್‌ನಿಂದ ಹಬ್ಬುವ ರೋಗದಿಂದ ಪ್ರಾಣಹಾನಿ ಸಂಭವಿಸುವುದಿಲ್ಲ. ಸಕಾಲಕ್ಕೆ ಚಿಕಿತ್ಸೆ ಕೊಡಿಸಿದಲ್ಲಿ ರೋಗವನ್ನು ಸುಲಭವಾಗಿ ಹತೋಟಿಗೆ ತರಬಹುದು’ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.