ಗುಬ್ಬಿ: ನರೇಗಾ ಯೋಜನೆಯ ಬಗ್ಗೆ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಯವರು ಅರಿವು ಮೂಡಿಸಬೇಕು ಎಂದು ಶಾಸಕ ಎಂ.ಟಿ ಕೃಷ್ಣಪ್ಪ ತಿಳಿಸಿದರು.
ಸೋಮವಾರ ತಾಲ್ಲೂಕಿನ ಸಿ.ಎಸ್ ಪುರ ಹೋಬಳಿ ಹಿಂಡಿಸಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಎನ್‌ಆರ್‌ಎಲ್‌ಎಂ ಸಂಜೀವಿನಿ ಭವನ ಉದ್ಘಾಟಿಸಿ ಮಾತನಾಡಿದರು.
ನರೇಗಾ ಕಾಮಗಾರಿಯಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಂಡಲ್ಲಿ ಉತ್ತಮ ಕೆಲಸಗಳಾಗಲು ಸಾಧ್ಯ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಜನರಿಗೆ ವಂಚಿಸುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಕೆಂಪಣ್ಣ, ಕೃಷ್ಣೇಗೌಡ, ಗುರುಪ್ರಕಾಶ್, ಲೋಕೇಶ್, ಪ್ರಕಾಶ್, ವೆಂಕಟೇಶ್, ನಾಗರಾಜು, ಗಂಗಾಧರ್ ಗೌಡ, ಸಿದ್ದರಾಮಯ್ಯ, ಈರಣ್ಣ, ರೇಷ್ಮ, ಭಾರತೀ ಹುಚ್ಚಯ್ಯ, ಕವಿತ ಕೃಷ್ಣಮೂರ್ತಿ, ಸುಧಾಮಣಿ, ಶ್ವೇತ, ಅನ್ನಪೂರ್ಣ, ಪ್ರೇಮ, ಮಮತ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.