ADVERTISEMENT

ಶಾರ್ಟ್ ಸರ್ಕಿಟ್; 6.5 ಎಕರೆ ತೋಟ ಭಸ್ಮ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 11:29 IST
Last Updated 24 ಏಪ್ರಿಲ್ 2019, 11:29 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯಲ್ಲಿ ಬೆಂಕಿ ಅವಘಡದಿಂದ ಹೊತ್ತಿ ಉರಿದ ತೆಂಗಿನ ಮರಗಳು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯಲ್ಲಿ ಬೆಂಕಿ ಅವಘಡದಿಂದ ಹೊತ್ತಿ ಉರಿದ ತೆಂಗಿನ ಮರಗಳು.   

ಚಿಕ್ಕನಾಯಕನಹಳ್ಳಿ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ 6.5 ಎಕರೆ ತೆಂಗಿನತೋಟ ಬೆಂಕಿಗೆ ಆಹುತಿ ಆಗಿದೆ.

ತೋಟದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ನಿಂದ ಸಿಡಿದ ಕಿಡಿ ಪಕ್ಕದಲ್ಲಿದ್ದ ಬಿದುರು ಮೆಳೆಗೆ ತಗುಲಿದೆ. ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಜೊತೆಗೆ ಬಿಸಿಲಿಗೆ ತೋಟ ಬಳಲಿ ಬೆಂಡಾಗಿದ್ದರಿಂದ ಹಾಗೂ ಒಣಸೋಗೆ ಇದ್ದುದ್ದರಿಂದ ಬೆಂಕಿ ಹತೋಟಿಗೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

ADVERTISEMENT

ರೈತರಾದ ಶಿವಪ್ರಸಾದ್ ಹಾಗೂ ಮಲ್ಲಿಕಾರ್ಜುನಯ್ಯ ಎಂಬುವವರಿಗೆ ಸೇರಿದ್ದ ಸರ್ವೆ ನಂ.49 ಹಾಗೂ 50ರಲ್ಲಿದ್ದ 250ಕ್ಕೂ ಹೆಚ್ಚು ತೆಂಗಿನ ಮರಗಳು, ಮಾವಿನ ಮರಗಳು, ಜೀವಂತ ಬೇಲಿ ಹಾಗೂ ಬಿದುರು ಮೆಳೆಗಳು ಬೆಂಕಿಯಲ್ಲಿ ಭಸ್ಮವಾಗಿವೆ. ಶಿವಪ್ರಸಾದ್ ಅವರಿಗೆ ₹ 10 ಲಕ್ಷ ಹಾಗೂ ಮಲ್ಲಿಕಾರ್ಜುನಯ್ಯ ಅವರಿಗೆ ₹ 4 ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.