ADVERTISEMENT

‘ಕುಂಚಿಟಿಗರಿಗೆ ಒಬಿಸಿ ಸ್ಥಾನಮಾನ ನೀಡಿ’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 5:45 IST
Last Updated 20 ಸೆಪ್ಟೆಂಬರ್ 2022, 5:45 IST
ಮಧುಗಿರಿಯಲ್ಲಿ ನಡೆದ ತಾಲ್ಲೂಕು ಕುಂಚಿಟಿಗರ ಸಂಘದ ವಾರ್ಷಿಕ ಸಭೆಯಲ್ಲಿ ಹನುಮಂತನಾಥ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು
ಮಧುಗಿರಿಯಲ್ಲಿ ನಡೆದ ತಾಲ್ಲೂಕು ಕುಂಚಿಟಿಗರ ಸಂಘದ ವಾರ್ಷಿಕ ಸಭೆಯಲ್ಲಿ ಹನುಮಂತನಾಥ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು   

ಮಧುಗಿರಿ: ‘ಕುಂಚಿಟಿಗ ಜನಾಂಗವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸುವಂತೆ ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದು ಎಲೆರಾಂಪುರದ ಕುಂಚಿಟಿಗ ಮಠದ ಅಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಿಳಿಸಿದರು

ಪಟ್ಟಣದ ಕುಂಚಿಟಿಗರ ಸಮುದಾಯ ಭವನದಲ್ಲಿ ನಡೆದ ತಾಲ್ಲೂಕು ಕುಂಚಿಟಿಗರ ಸಂಘದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಮೀಸಲಾತಿ ಪಡೆಯುವುದರ ಜೊತೆಗೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ ಎಂದರು.

ADVERTISEMENT

ಜಿಲ್ಲೆಯ ಕುಂಚಿಟಿಗ ಸಂಘಗಳಲ್ಲಿ ಮಧುಗಿರಿ ಸಂಘ ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಸಂಘದಲ್ಲಿ ಕನಿಷ್ಠ ಮೂವತ್ತು ಸಾವಿರ ಸದಸ್ಯರನ್ನು ಹೊಂದಬೇಕಿದೆ ಎಂದು ಹೇಳಿದರು.

ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎನ್. ರಾಜಶೇಖರ್, ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ ಬಾಬು, ಎಂ.ಎಲ್. ಗಂಗರಾಜು, ಲಾಲಪೇಟೆ ಮಂಜುನಾಥ್, ಗುತ್ತಿಗೆದಾರ ಮಹೇಶ್, ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಡಿ.ಎಸ್. ಸಿದ್ದಪ್ಪ, ಕಾರ್ಯದರ್ಶಿ ಸಿ.ವಿ. ಉಮೇಶ್, ಪದಾಧಿಕಾರಿಗಳಾದ ಜಿ. ಜಯರಾಮಯ್ಯ, ಟಿ. ರಾಮಣ್ಣ, ರಾಮಚಂದ್ರಯ್ಯ, ನಿರ್ದೇಶಕರಾದ ಚೆನ್ನಲಿಂಗಪ್ಪ, ಸುವರ್ಣಮ್ಮ, ದೇವರಾಜು, ಸಿ. ಕುಮಾರ್, ಎಂ.ಎಸ್. ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.