ADVERTISEMENT

ತೋವಿನಕೆರೆ | ಒಂದು ಕಟ್ಟು ವೀಳ್ಯದೆಲೆ ₹20ಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 31 ಮೇ 2025, 4:20 IST
Last Updated 31 ಮೇ 2025, 4:20 IST
ತೋವಿನಕೆರೆ ಮಾರುಕಟ್ಟೆಯಲ್ಲಿ ವೀಳ್ಯದೆಲೆ ಮಾರಾಟ
ತೋವಿನಕೆರೆ ಮಾರುಕಟ್ಟೆಯಲ್ಲಿ ವೀಳ್ಯದೆಲೆ ಮಾರಾಟ   

ತೋವಿನಕೆರೆ: ತೋವಿನಕೆರೆಯಲ್ಲಿ ಶುಕ್ರವಾರ ನೂರು ಎಲೆಗಳ ಒಂದು ಕಟ್ಟು ವೀಳ್ಯದೆಲೆ ಬೆಲೆ ₹20ಕ್ಕೆ ಕುಸಿದಿದೆ.

ಮಾರುಕಟ್ಟೆಗೆ ಮೊದಲಿಗಿಂತ ಎರಡರಷ್ಟು ವೀಳ್ಯದೆಲೆ ಬರುತ್ತಿದ್ದು, ಮತ್ತಷ್ಟು ಬೆಲೆ ಕುಸಿಯಬಹುದು. ಜೇಷ್ಠ ಮಾಸದಲ್ಲಿ ಈ ಪ್ರಮಾಣದಲ್ಲಿ ಬೆಲೆ ಕುಸಿತವಾದರೆ, ಮುಂದೆ ಆಷಾಢದಲ್ಲಿ ಬೆಲೆ ಏನಾಗುತ್ತದೆ ಎನ್ನುವುದು ಬೆಳೆಗಾರರ ಅತಂಕ.

ಪೂರ್ವ ಮುಂಗಾರಿನಲ್ಲಿ ಮಳೆ ಹೆಚ್ಚು ಬಂದಿದ್ದರಿಂದ ವೀಳ್ಯದೆಲೆ ಇಳುವರಿ ಹೆಚ್ಚಾಗಿದ್ದು, ಬೆಲೆ ಕುಸಿದಿದೆ ಎನ್ನುತ್ತಾರೆ ಬೆಳೆಗಾರ ವಸಂತ್ ಕುಮಾರ್ ಟಿ.ಎಂ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.