ತುಮಕೂರು: ನಗರದ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ಕಲೋತ್ಸವಕ್ಕೆ ತೆರೆಬಿತ್ತು.
ಕಲೋತ್ಸವದಲ್ಲಿ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 10 ತಂಡಗಳು 35 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ‘ಸಂಸ್ಕೃತಿ’ ತಂಡ ಮೊದಲ ಸ್ಥಾನ ಪಡೆದು ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು. ವಿದ್ಯಾರ್ಥಿಗಳ ಕಲಾ ಪ್ರದರ್ಶನಗಳು ನೆರೆದ ಪ್ರೇಕ್ಷಕರ ಮನ ತಣಿಸಿದವು.
ಸಂಗೀತ, ನಾಟಕ, ಚಿತ್ರಕಲೆ, ರಂಗೋಲಿ, ಗಾಯನ, ಮಿಮಿಕ್ರಿ, ಫ್ಯಾಶನ್ ಶೊ, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಧ್ಯಾಪಕಿಯರು ನಡೆಸಿದ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ಫ್ಯಾಷನ್ ಶೊ ನೋಡುಗರ ಗಮನ ಸೆಳೆಯಿತು.
ಸಮಾರೋಪ ಸಮಾರಂಭದಲ್ಲಿ ಗಾಯಕ ಅಶ್ವಿನ್ ಶರ್ಮಾ, ಸಾಹೇ ವಿ.ವಿ ಕುಲಪತಿ ಕೆ.ಬಿ.ಲಿಂಗೇಗೌಡ, ಪ್ರಾಂಶುಪಾಲ ಎಂ.ಎಸ್.ರವಿಪ್ರಕಾಶ್, ರಿಜಿಸ್ಟ್ರಾರ್ ಎಂ.ಝಡ್.ಕುರಿಯನ್, ಡೀನ್ ರೇಣುಕಾಲತಾ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ವಿಷ್ಣು ನಾಯಕ, ಕಾರ್ತಿಕ್, ಲಿಖಿತ್, ಮೇಘನ್‌ಗೌಡ, ಯಶವಂತ್, ವೈಷ್ಣವಿ, ಚೈತ್ರಾ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.