ADVERTISEMENT

ಕುಣಿಗಲ್: ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಶಾಸಕ ಡಾ.ರಂಗನಾಥ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 14:17 IST
Last Updated 25 ಆಗಸ್ಟ್ 2024, 14:17 IST
ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾಮದ ರಾಜೇಶ್ ಅವರ ಗದ್ದೆಯಲ್ಲಿ ಶಾಸಕ ಡಾ.ರಂಗನಾಥ್ ಭತ್ತ ನಾಟಿ ಮಾಡಿದರು
ಕುಣಿಗಲ್ ತಾಲ್ಲೂಕು ಯಡವಾಣಿ ಗ್ರಾಮದ ರಾಜೇಶ್ ಅವರ ಗದ್ದೆಯಲ್ಲಿ ಶಾಸಕ ಡಾ.ರಂಗನಾಥ್ ಭತ್ತ ನಾಟಿ ಮಾಡಿದರು   

ಕುಣಿಗಲ್: ಶಾಸಕ ಡಾ.ರಂಗನಾಥ್ ಭಾನುವಾರ ತಾಲ್ಲೂಕಿನ ಯಡವಾಣಿ ಗ್ರಾಮದ ರೈತ ರಾಜೇಶ್ ಅವರ ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು.

ಯಡವಾಣಿ ಗ್ರಾಮದಲ್ಲಿ ರೈತ ಮಹಿಳೆಯರು ಗದ್ದೆ ನಾಟಿ ಮಾಡುವುದನ್ನು ಕಂಡು ತಾವು ಗದ್ದೆ ಬಯಲಿಗಿಳಿದು ನಾಟಿ ಮಾಡಿದರು. ನಂತರ ಕೃಷಿ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು.

ಎಲ್ಲ ಕಾರ್ಯಕ್ಷೇತ್ರಗಳಿಗಿಂತ ಸುಂದರವಾದ ಪರಿಸರದ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವುದು ಒಂದು ವಿಶೇಷ ಅನುಭವ. ಕೃಷಿಗೆ ಅಗತ್ಯವಾಗಿರುವ ನೀರು, ಗುಣಮಟ್ಟದ ಬೀಜ, ರಸಗೊಬ್ಬರವನ್ನು ಸಕಾಲದಲ್ಲಿ ನೀಡಬೇಕಿದೆ. ಗ್ರಾಮೀಣ ಪ್ರದೇಶದ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದ ಯುವ ಜನತೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಹೆಚ್ಚಿನ ಆದಾಯ ಪಡೆದು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.