ಕುಣಿಗಲ್: ತಾಲ್ಲೂಕಿನ ಬಿಳಿದೇವಾಲಯ ಗ್ರಾಮ ಪಂಚಾಯಿತಿಯ ಬೋರಲಿಂಗನಪಾಳ್ಯ ಅಂಬೇಡ್ಕರ್ ಭವನದ ದಾರಿಯನ್ನು ಕೆಲ ಗ್ರಾಮಸ್ಥರು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಸಮತ ಸೈನಿಕದಳದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಬೋರಲಿಂಗನಪಾಳ್ಯಕ್ಕೆ ಸೇರಿದ ಹರಿಜನ ಕಾಲೊನಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು, ಭವನಕ್ಕೆ ಹೋಗುವ ದಾರಿಯನ್ನು ಕೆಲ ಗ್ರಾಮಸ್ಥರು (ಸಿದ್ದಯ್ಯ, ಗಂಗಕರಿಯಪ್ಪ, ಲೋಕೇಶ್, ನಾಗರಾಜು, ಗಂಗಣ್ಣ) ಅತಿಕ್ರಮಣ ಮಾಡಿ ರಾತ್ರೋರಾತ್ರಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಪ್ರಯೋಜನವಾಗಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಗರುಡ ರಂಗಯ್ಯ, ರವಿಕುಮಾರ್, ರಾಜೇಂದ್ರ, ಲೋಕೇಶ, ನರಸಿಂಹಮೂರ್ತಿ, ರಂಗಯ್ಯ ಮತ್ತು ಸ್ತ್ರೀ ಶಕ್ತಿ ಗುಂಪಿನ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.