ADVERTISEMENT

ಹಲೊ ಭಾಯಿಯೊ... ಝರಾ ಸುನ್‌ ಲೊ...

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 16:27 IST
Last Updated 7 ಏಪ್ರಿಲ್ 2019, 16:27 IST

ತುಮಕೂರು: ಹಲೊ ಭಾಯಿಯೊ... ಝರಾ ಸುನ್ ಲೊ... ಏಕ್ ಮಿನಿಟ್ ಠೆಹರೊ... ನಾನು ಸಚಿವ ಜಮೀರ್ ಅಹಮ್ಮದ್ ಅವರ ತಮ್ಮ. ನನ್ನ ಕಿಸೆಯಲ್ಲಿದ್ದ ಪಿಂಕ್ ಬಣ್ಣದ ಪರ್ಸ್ ಕಾಣುತ್ತಿಲ್ಲ. ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಸಿಕ್ಕಿದ್ದರೆ ದಯವಿಟ್ಟು ಕೊಟ್ಟುಬಿಡಿ. ಅದರಲ್ಲಿನ ₹ 30 ಸಾವಿರ ನೀವೇ ಇಟ್ಕೊಳ್ಳಿ. ಪರ್ಸ್ ವಾಪಸ್ ಕೊಡಿ...

ಹೀಗೆ ಗಂಟಲು ಹರಿದಿಕೊಳ್ಳುವ ರೀತಿ ಕೂಗಾಡಿದ್ದು ಸಚಿವ ಜಮೀರ್ ಸಹೋದರ ಸೋಹೆಲ್ ಖಾನ್. ಜೆಡಿಎಸ್, ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯಕರ್ತರ ಸಮಾವೇಶಕ್ಕೆ ಬಂದಿದ್ದ ಅವರು ವೇದಿಕೆಯಲ್ಲಿದ್ದರು. ವೇದಿಕೆಯಿಂದ ಕೆಳಗೆ ಇಳಿದಾಗ ಪರ್ಸ್ ಇಲ್ಲದ್ದು ಗೊತ್ತಾಗಿ ಸೇರಿದ್ದ ಜನರಿಗೆ ಪರ್ಸ್ ಕೊಡಿ ಕೊಡಿ ಎಂದು ಗೋಳಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT