ADVERTISEMENT

ತುಮಕೂರು: ಗ್ರಾಮ ವಾಸ್ತವ್ಯದಲ್ಲಿ ಮಳೆಯಿಂದ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 16:13 IST
Last Updated 18 ಜೂನ್ 2022, 16:13 IST
ತುರುವೇಕೆರೆ ತಾಲ್ಲೂಕಿನ ಆನಡಗು ಗ್ರಾಮದಲ್ಲಿ ಶನಿವಾರ ಮಳೆಯ ಮಧ್ಯೆ ನಡೆದ ಗ್ರಾಮ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು.
ತುರುವೇಕೆರೆ ತಾಲ್ಲೂಕಿನ ಆನಡಗು ಗ್ರಾಮದಲ್ಲಿ ಶನಿವಾರ ಮಳೆಯ ಮಧ್ಯೆ ನಡೆದ ಗ್ರಾಮ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು.   

ತುಮಕೂರು: ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ' ಗ್ರಾಮ ವಾಸ್ತವ್ಯ'ದ ವೇಳೆ ಸುರಿದ ಮಳೆಯಿಂದಾಗಿ ಅವ್ಯವಸ್ಥೆಯುಂಟಾಗಿ, ಸಾರ್ವಜನಿಕರು ಪರದಾಡಿದರು.

ತುರುವೇಕೆರೆ ತಾಲ್ಲೂಕಿನ ಆನಡಗು ಗ್ರಾಮದಲ್ಲಿ ಸಂಜೆ 7 ಗಂಟೆಗೆ ಆಯೋಜಿಸಿದ್ದ ಗ್ರಾಮ ಸಭೆಯು ಮಳೆಯಿಂದಾಗಿ ಸರಿಯಾಗಿ ನಡೆಯಲಿಲ್ಲ. ತುಂಬಾ ಬೇಗ ಮುಗಿಸಲಾಯಿತು.

ಗ್ರಾಮ ವಾಸ್ತವ್ಯದ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರೇ ಇರಲಿಲ್ಲ. ಕೇವಲ ಗಣ್ಯರಿಗೆ ಮತ್ತು ಮಾಧ್ಯಮದವರಿಗೆ ಮೀಸಲಿಟ್ಟಿದ್ದ ಆಸನಗಳು ಮಾತ್ರ ಭರ್ತಿಯಾಗಿದ್ದವು. ಮಳೆ ಸುರಿಯುತ್ತಿದ್ದರಿಂದ ಹೆಚ್ಚಿನ ಜನರು ಆಗಮಿಸಿರಲಿಲ್ಲ. ವೇದಿಕೆ ಮುಂಭಾಗ ಖಾಲಿ ಕುರ್ಚಿಗಳು ಪ್ರದರ್ಶನವಾದವು.

ADVERTISEMENT

ತುರುವೇಕೆರೆ ತಾಲ್ಲೂಕಿನ ಆನಡಗು ಗ್ರಾಮದಲ್ಲಿ ಶನಿವಾರ ಮಳೆಯ ಮಧ್ಯೆ ನಡೆದ ಗ್ರಾಮ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. ಶಾಸಕರಾದ ಮಸಾಲೆ‌ ಜಯರಾಂ, ಜಿ.ಬಿ.ಜ್ಯೋತಿಗಣೇಶ್, ಸಿ.ಎಂ.ರಾಜೇಶ್ ಗೌಡ, ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.