ADVERTISEMENT

ತಿಪಟೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಸುವಿಗೆ ಮರುಜನ್ಮ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:12 IST
Last Updated 4 ಮಾರ್ಚ್ 2021, 4:12 IST
ಶಸ್ತ್ರಚಿಕಿತ್ಸೆಯ ನಂತರ ಹಸುವಿನೊಂದಿಗೆ ವೈದ್ಯರು ಹಾಗೂ ಹಸುವಿನ ಮಾಲೀಕರು
ಶಸ್ತ್ರಚಿಕಿತ್ಸೆಯ ನಂತರ ಹಸುವಿನೊಂದಿಗೆ ವೈದ್ಯರು ಹಾಗೂ ಹಸುವಿನ ಮಾಲೀಕರು   

ತಿಪಟೂರು: ಜಾಪ್‌ಟ್ರಾಪ್ ಎನ್ನುವ ವಿಭಿನ್ನ ಶಸ್ತ್ರಚಿಕಿತ್ಸೆ ಮೂಲಕ ಪಶುವೈದ್ಯರ ತಂಡವೊಂದು ಗುದದ್ವಾರದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಸುವನ್ನು ಬದುಕಿಸಿದ್ದಾರೆ.

ತಾಲ್ಲೂಕಿನ ಬನ್ನೀಹಳ್ಳಿಯ ನಿರಂಜನಮೂರ್ತಿ ಎಚ್.ಎಫ್ ಹಸುವೊಂದು ಗುದದ್ವಾರದ ಕ್ಯಾನ್ಸರ್‌ನಿಂದ ಬಳಲುತ್ತಿತ್ತು. ಗುದದ್ವಾರ ಮತ್ತು ಯೋನಿದ್ವಾರದ ನಡುವೆ ಬೆಳೆದಿದ್ದ ಗಡ್ಡೆ, ಯೋನಿ ದ್ವಾರದ ಮುಕ್ಕಾಲು ಭಾಗ ಮತ್ತು ಗುದದ್ವಾರದ ಅರ್ಧ ಭಾಗವನ್ನು ಆವರಿಸಿತ್ತು. ಹಸು 7 ತಿಂಗಳ ಗರ್ಭಧರಿಸಿದ್ದು, ಕರು ಹಾಕುವ ಸಂದರ್ಭದಲ್ಲಿ ಯೋನಿದ್ವಾರ ಕಿರಿದಾದ್ದರಿಂದ ಸಮಸ್ಯೆಯಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಡೆಸಿದರೂ ಕ್ಯಾನ್ಸರ್ ಮರುಕಳಿಸಬಹುದಾದಸಾಧ್ಯತೆಗಳಿತ್ತು.

ದಸರೀಘಟ್ಟ ಪಶುಚಿಕಿತ್ಸಾಲಯದ ವೈದ್ಯ ಡಾ. ಚೈತ್ರ ವೈ. ಚನ್ನರಾಯಪಟ್ಟಣ ತಾಲ್ಲೂಕಿನ ಸಾತೇನಹಳ್ಳಿ ಪಶುಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಪ್ರಮೋದ್ ಜೆ.ಕೆ, ಅಣತಿ ಪಶುಚಿಕಿತ್ಸಾಲಯದ ಡಾ. ಮಂಜುನಾಥ್ ಎಸ್.ಪಿ, ಅವರ ತಂಡ ‘ಜಾಪ್ ಟ್ರಾಪ್’ ಎನ್ನುವ ವಿಭಿನ್ನ ಶಸ್ತ್ರಚಿಕಿತ್ಸೆ ನಡೆಸಿದರು.

ADVERTISEMENT

ಗಾಯ ಸಂಪೂರ್ಣವಾಗಿ ಗುಣಮುಖವಾಗಿ ಎರಡು ತಿಂಗಳ ನಂತರ ಹಸುವು ಕರುವಿಗೆ ಜನ್ಮ ನೀಡಿತು. ಈಗ ಹಸು ಹಾಗೂ ಕರುಗಳೆರಡೂ ಆರೋಗ್ಯವಂತವಾಗಿದ್ದು, ದಿನಕ್ಕೆ 20 ಲೀಟರ್ ಹಾಲನ್ನು ಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.