ADVERTISEMENT

ತುಮಕೂರು: ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:24 IST
Last Updated 26 ಏಪ್ರಿಲ್ 2024, 4:24 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಕೆನರಾ ಬ್ಯಾಂಕ್ ಖಾತೆಗೆ ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಿಸಬೇಕು ಎಂದು ನಂಬಿಸಿ ನಗರದ ನಿವಾಸಿ ಟಿ.ಶ್ರೀನಿವಾಸಬಾಬು ಎಂಬುವರಿಗೆ ₹5 ಲಕ್ಷ ವಂಚಿಸಲಾಗಿದೆ.

ಏ. 22ರಂದು ಆರೋಪಿಗಳು ಕರೆ ಮಾಡಿ ಬೆಂಗಳೂರಿನ ಕೆನರಾ ಬ್ಯಾಂಕ್‌ ಮುಖ್ಯ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘ಆಧಾರ್‌ ಮತ್ತು ಪಾನ್‌ ಕಾರ್ಡ್‌ ಲಿಂಕ್‌ ಮಾಡಿಸಲು ಇಂದೇ ಕೊನೆಯ ದಿನ’ ಎಂದು ತಿಳಿಸಿ ಕರೆ ಕಟ್‌ ಮಾಡಿದ್ದಾರೆ. ನಂತರ ಮತ್ತೊಬ್ಬರು ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ.

ಶ್ರೀನಿವಾಸಬಾಬು ಅವರು ಯಾವುದೇ ಮಾಹಿತಿ ನೀಡದಿದ್ದರೂ ಅವರ ಖಾತೆಯಿಂದ ಹಂತ ಹಂತವಾಗಿ ₹5,23,733 ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಕೆನರಾ ಬ್ಯಾಂಕ್‌ನ ಎಸ್‌.ಎಸ್‌.ಪುರಂ ಶಾಖೆಗೆ ಹೋಗಿ ಬ್ಯಾಂಕ್‌ ಖಾತೆಯ ವಿವರ ಪರಿಶೀಲಿಸಿದಾಗ ಹಣ ಕಡಿತ ಆಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.