- ಸಾಂದರ್ಭಿಕ ಚಿತ್ರ
ಕುಣಿಗಲ್: ತಾಲ್ಲೂಕಿನ ಬಿದನಗೆರೆ ಸತ್ಯಶನೇಶ್ವರ ದೇವಾಲಯದ ಸಂಸ್ಥಾಪಕ ಧನಂಜಯ್ಯ ಸ್ವಾಮಿ ಅವರು ಹುಲಿ ಉಗುರಿನ ಪದಕ ಹಾಕಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ವಲಯ ಅರಣ್ಯಾಧಿಕಾರಿ ತಂಡ ದೇವಾಲಯ ಮತ್ತು ಮನೆಯಲ್ಲಿ ಮಂಗಳವಾರ ಸಂಜೆ ತಪಾಸಣೆ ನಡೆಸಿತು.
ಈ ಸಂಬಂಧ ನಾಗರಾಜು ಎಂಬವರು ನೀಡಿದ ದೂರಿನ ಮೇಲೆ ತಾಲ್ಲೂಕು ವಲಯ ಅರಣ್ಯಾಧಿಕಾರಿ ಜಗದೀಶ್ ಮತ್ತು ತಂಡ ಬಿದನಗೆರೆಯಲ್ಲಿರುವ ಧನಂಜಯ್ಯ ಸ್ವಾಮಿ ಅವರಿಗೆ ಸೇರಿದ ಮನೆ ಮತ್ತು ದೇವಾಲಯಗಳಲ್ಲಿ ತಪಾಸಣೆ ನಡೆಸಿತು. ಆದರೆ, ಅಂತಹ ಪದಕ ಎಲ್ಲೂ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಎರಡು ವರ್ಷದ ಹಿಂದೆ ಹುಲಿ ಉಗುರಿನ ಪದಕ ಇತ್ತು. ಕಪ್ಪು ಬಣ್ಣಕ್ಕೆ ತಿರುಗಿದ ಕಾರಣ ಎಸೆದಿರುವುದಾಗಿ ಧನಂಜಯ್ಯ ಸ್ವಾಮಿ ಹೇಳಿಕೆ ನೀಡಿದ್ದಾರೆ. ಆದರೂ ತನಿಖೆ ಮುಂದುವರೆಯುತ್ತಿದೆ’ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.