ADVERTISEMENT

ತುಮಕೂರು: ಗ್ರಾಮ ಪಂಚಾಯಿತಿ ಮತದಾನಕ್ಕೆ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 4:34 IST
Last Updated 30 ಮಾರ್ಚ್ 2021, 4:34 IST
ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರು ಸಾಲುಗಟ್ಟಿ ನಿಂತಿದ್ದರು
ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರು ಸಾಲುಗಟ್ಟಿ ನಿಂತಿದ್ದರು   

ವೈ.ಎನ್. ಹೊಸಕೋಟೆ: ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಗೆ ಸೋಮವಾರ ಮತದಾನ ನಡೆಯಿತು. ಒಟ್ಟು 8 ವಾರ್ಡ್‌ಗಳ 32 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 9,351 ಮತಗಳ ಪೈಕಿ 7,540 ಮತಗಳು ಚಲಾವಣೆಯಾದವು.

ಮುಂಜಾನೆಯಿಂದ ಮತದಾನ ಬಿರುಸುಗೊಂಡಿತ್ತು. ಮಧ್ಯಾಹ್ನ ಬಿಸಿಲಿನ ಬೇಗೆಗೆ ಕಡಿಮೆ ಪ್ರಮಾಣದಲ್ಲಿ ಕಂಡುಬಂದರು ಸಂಜೆ ವೇಗ ಪಡೆದುಕೊಂಡಿತ್ತು.ಮತಕೇಂದ್ರಗಳ ಸುತ್ತಮುತ್ತ ಅಭ್ಯರ್ಥಿಗಳು ಕ್ರಮಸಂಖ್ಯೆ ಮತ್ತು ಚಿಹ್ನೆಯ ಚೀಟಿ ನೀಡುತ್ತಾ ಮತಯಾಚನೆ ಮಾಡುತ್ತಿದ್ದರು. ಕೆಲವು ಮತದಾರರ ಕೈಗಳ ಮೇಲೆ ಕ್ರಮ ಸಂಖ್ಯೆ ಬರೆದು ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು.

ಕೋವಿಡ್ ಎರಡನೇ ಅಲೆಯ ಭೀತಿಯಿಂದ ಮತಕೇಂದ್ರಗಳಲ್ಲಿ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಜ್‌ ವ್ಯವಸ್ಥೆ ಮಾಡಲಾಗಿತ್ತು. ಬಸ್ ನಿಲ್ದಾಣದಲ್ಲಿ ಸಂಪೂರ್ಣವಾಗಿ ಬಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ಓಡಾಟ ತಡೆಯಲಾಗಿತ್ತು. ಪರ ಊರುಗಳಿಂದ ಬಂದು ಹೋಗುವ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.