ADVERTISEMENT

643 ನೋಟಾ, 182 ಮತ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 5:55 IST
Last Updated 11 ನವೆಂಬರ್ 2020, 5:55 IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 643 ನೋಟ ಮತಗಳು ಚಲಾವಣೆಯಾಗಿವೆ. 182 ಅಂಚೆ ಮತಗಳು ತಿರಸ್ಕೃತವಾಗಿವೆ. ಕಣದಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳಿದ್ದರು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಹೊರತುಪಡಿಸಿದರೆ ಸಿಪಿಐ ಅಭ್ಯರ್ಥಿ ಗಿರೀಶ್ 1,697 ಮತಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿ ಇದ್ದಾರೆ.

ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಹೊರತುಪಡಿಸಿದರೆ ಉಳಿದವರು ಠೇವಣಿ ಕಳೆದುಕೊಂಡಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಓಬಳೇಶಪ್ಪ 628, ರೈತ ಭಾರತ ಪಕ್ಷದ ತಿಮ್ಮಕ್ಕ 220, ರಿಪಬ್ಲಿಕನ್ ಸೇನಾದ ಪ್ರೇಮಕ್ಕ106, ಪಕ್ಷೇತರರಾದ ಆಂಬ್ರೋಸ್ ಡಿ.ಮೆಲ್ಲೊ 123, ಎಂ.ಎಲ್‌.ಎ.ಆರ್.ಕಂಬಣ್ಣ 135, ಗುರುಸಿದ್ದಪ್ಪ ಎಂ.175, ಜಯಣ್ಣ 221, ಎಲ್‌.ಕೆ.ದೇವರಾಜ್ 578, ಜಿ.ಎಸ್.ನಾಗರಾಜು 436, ರಂಗಪ್ಪ 212 ಮತ್ತು ಸಾದಿಕ್ ಪಾಷ 568 ಮತಗಳನ್ನು ಪಡೆದಿದ್ದಾರೆ.

ಅಂಚೆ ಮತದಲ್ಲೂ ಬಿಜೆಪಿ ಮುಂದೆ: ಒಟ್ಟು 4,826 ಅಂಚೆ ಮತಗಳು ಚಲಾವಣೆ ಆಗಿದ್ದವು. ಇದಲ್ಲಿಯೂ ಬಿಜೆಪಿ ಹೆಚ್ಚು ಮತಗಳನ್ನು ಪಡೆದಿದೆ. ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ 2,042, ಕಾಂಗ್ರೆಸ್‌ನ ಜಯಚಂದ್ರ 1,577 ಮತ್ತು ಜೆಡಿಎಸ್‌ನ ಅಮ್ಮಾಜಮ್ಮ 801 ಅಂಚೆ ಮತಗಳನ್ನು ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.