ADVERTISEMENT

ಶಿರಾ | ಜಾತ್ರೆ ನಡೆದರೆ ಗ್ರಾಮಗಳಲ್ಲಿ ನೆಮ್ಮದಿ : ಹನುಮಂತನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 13:26 IST
Last Updated 10 ಮಾರ್ಚ್ 2025, 13:26 IST
ಶಿರಾ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಭಾಗವಹಿಸಿದ್ದರು
ಶಿರಾ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಭಾಗವಹಿಸಿದ್ದರು   

ಶಿರಾ: ಜಾತ್ರಾ ಮಹೋತ್ಸವ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಗ್ರಾಮಗಳಲ್ಲಿ ಒಗ್ಗಟ್ಟು, ನೆಮ್ಮದಿ ಹಾಗೂ ಶಾಂತಿ ನೆಲೆಸಲು ಕಾರಣವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದ ರಂಗನಾಥ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ದೇವರ ಉಪಸ್ಥಿತಿ ಮನುಷ್ಯನ ಅಂತರಂಗದಲ್ಲಿ ಇದ್ದಾಗ ಸನ್ಮಾಗದಲ್ಲಿ ನಡೆಯುತ್ತಾನೆ. ಆದರೆ ಅಹಂ, ಪ್ರತಿಷ್ಠೆ, ಹಣದ ದಾಸನಾಗಿ ಮಾನವ ದಾನವನಾಗಿ ಮುಕ್ತಿ ಹೊಂದಲು ಸಾಧ್ಯವಾಗದೆ ಚಡಪಡಿಸುತ್ತಾನೆ. ಸಕಲ‌ ಜೀವಿಗಳಲ್ಲಿ ಕೂಡ ಭಗವಂತ ನೆಲೆಸಿರುತ್ತಾನೆ. ಅದನ್ನು ಕಾಣಬೇಕಾದರೆ ನಾನೆಂಬ ಅಹಂ ಕಳೆದುಕೊಂಡಾಗ ಮಾತ್ರ ದೈವ ದರ್ಶನವಾಗಲಿದೆ ಎಂದರು.

ADVERTISEMENT

ಮಣ್ಣಿನ ಋಣ, ತಾಯಿ ಋಣ, ಗುರುವಿನ ಋಣ ಅರ್ಥ ಮಾಡಿಕೊಳ್ಳಬೇಕು. ಇದರಿಂದಾಗಿ ಪಾಪ–ಪುಣ್ಯ ಬಗೆಗಿನ ವ್ಯಾಖ್ಯಾನ ತಿಳಿಯುತ್ತದೆ ಎಂದರು.

ದೇವಸ್ಥಾನ ಸಮಿತಿಯ ರಾಜು, ರಂಗನಾಥಪ್ಪ, ಮಂದಲಹಳ್ಳಿ ನಾಗರಾಜ್, ವಿಶ್ವನಾಥ್, ದೇವರಾಜ್, ಲಿಖಿತ್ ಇದ್ದರು.

ಶಿರಾ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.