ADVERTISEMENT

ಶಿರಾ ಸಂಪೂರ್ಣ ಲಾಕ್‌ಡೌನ್

ಎರಡು ಪ್ರಕರಣ ದೃಢ– ಅಂತೂ ಎಚ್ಚೆತ್ತ ತಾಲ್ಲೂಕು ಆಡಳಿತ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 17:12 IST
Last Updated 31 ಮಾರ್ಚ್ 2020, 17:12 IST
ಶಿರಾದ ಖಾಸಗಿ ಬಸ್ ನಿಲ್ದಾಣದ ರಸ್ತೆಯನ್ನು ಬಂದ್ ಮಾಡಲಾಗಿತ್ತು
ಶಿರಾದ ಖಾಸಗಿ ಬಸ್ ನಿಲ್ದಾಣದ ರಸ್ತೆಯನ್ನು ಬಂದ್ ಮಾಡಲಾಗಿತ್ತು   

ಶಿರಾ: ನಗರದಲ್ಲಿ ಕೊರೊನಾದ ಎರಡು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲ್ಲೂಕು ಆಡಳಿತ ಮಂಗಳವಾರ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಸಂಪೂರ್ಣ ಲಾಕ್‌ಡೌನ್ ಮಾಡಿದೆ.

ನಗರದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ತರಕಾರಿ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೂರಾರು ಜನ ಒಂದೇ ಕಡೆ ಗುಂಪು ಸೇರುತ್ತಿದ್ದರು. ಕೆಲ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸೋಮವಾರ ಸ್ಥಳೀಯರು ಬಾಲಾಜಿ ನಗರದಲ್ಲಿರುವ ತರಕಾರಿ ಮಾರುಕಟ್ಟೆ ಮುಚ್ಚುವಂತೆ ನಗರಸಭೆ ಮೇಲೆ ಒತ್ತಡ ತಂದಿದ್ದರು. ಎಚ್ಚೆತ್ತುಕೊಂಡ ನಗರಸಭೆ ಮಾರುಕಟ್ಟೆಯನ್ನು ಮುಚ್ಚಿ ಅಲ್ಲಿಗೆ ಹೋಗದಂತೆ ಜೆಸಿಬಿಯಿಂದ ಗುಂಡಿ ತೋಡಿರುವುದರಿಂದ ಮಂಗಳವಾರ ಮಾರುಕಟ್ಟೆ ಸಂಪೂರ್ಣ ಬಂದಾಗಿತ್ತು.

ADVERTISEMENT

ವಾಹನಗಳ ವಶ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 5 ಬಸ್‌, 10 ಕಾರು, 23 ಬೈಕ್ ಮತ್ತು 2 ಆಟೊಗಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಡಿವೈಎಸ್‌ಪಿ ಕುಮಾರಪ್ಪ ಹಾಗೂ ಸಿಪಿಐ ಶಿವಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.