ಶಿರಾ: ತಾಲ್ಲೂಕಿನ ದೊಡ್ಡಬಾಣಗೆರೆಯಲ್ಲಿ ನಡೆದ ಆಂಜನೇಯ, ಶಿವಪಾರ್ವತಿ, ಗಣಪತಿ, ನಾಗದೇವತೆ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಶುಕ್ರವಾರ ಸಂಜೆ ಆರತಿ ಹೊತ್ತು ಮೆರವಣಿಗೆಯಲ್ಲಿ ದೇವಾಲಯಕ್ಕೆ ತೆರಳಿದ ಮಹಿಳೆಯೊಬ್ಬರು ದೇವಾಲಯದ ಮುಂದೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ಕಾಡುಗೊಲ್ಲರ ಹಟ್ಟಿಯ ನಿವಾಸಿ ಪೂಜಾರಪ್ಪ ಅವರ ಪತ್ನಿ ಮಾರಕ್ಕ (56) ಎಂದು ಗುರುತಿಸಲಾಗಿದೆ.
ಕುಸಿದುಬಿದ್ದ ಮಾರಕ್ಕ ಅವರನ್ನು ಕೂಡಲೆ ಶಿರಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು.
ಮೃತರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದು ಶನಿವಾರ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.