ADVERTISEMENT

ಶಿರಡಿ ಸಾಯಿಬಾಬಾ ಮಂದಿರ; ದರ್ಶನ ಪಡೆದ ಭಕ್ತರು

ಬೆಳಗುಂಬ ರಸ್ತೆ ಶಿರಡಿ ಸಾಯಿಬಾಬಾ ಮಂದಿರದ 8ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:11 IST
Last Updated 19 ಮೇ 2019, 11:11 IST
ಶಿರಡಿ ಸಾಯಿಬಾಬಾ ಮೂರ್ತಿಗೆ ಅಲಂಕಾರ ಮಾಡಿರುವುದು
ಶಿರಡಿ ಸಾಯಿಬಾಬಾ ಮೂರ್ತಿಗೆ ಅಲಂಕಾರ ಮಾಡಿರುವುದು   

ತುಮಕೂರು: ನಗರದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಎದುರಿನ ಶಿರಡಿ ಸಾಯಿಬಾಬಾ ನಗರದ ಸಾಯಿಬಾಬಾ ಮಂದಿರ ಟ್ರಸ್ಟ್‌ನ ಸಾಯಿಬಾಬಾ ಮಂದಿರದ 8ನೇ ವಾರ್ಷಿಕೋತ್ಸವ ಈಚೆಗೆನಡೆಯಿತು.

ಶಿರಡಿ ಸಾಯಿಬಾಬಾಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾಕಡ ಆರತಿ, ಮಹಾ ಮಂಗಳಾರತಿ, ಕ್ಷೀರಾಭಿಷೇಕ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.

ಸಂಜೆ ಸಾಯಿಬಾಬಾ ಅಷ್ಟೋತ್ತರ, ದೂಪ ಆರತಿ, ಸಾಯಿ ಭಜನೆ, ಶೇಜಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆದವು.

ADVERTISEMENT

ಮಹಿಳಾ ಭಜನಾ ತಂಡದವರು ಅಷ್ಟೋತ್ತರ ಪಾರಾಯಣ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಶಿರಡಿ ಬಾಬಾ ಮಂದಿರಕ್ಕೆ ಪುಷ್ಪಾಲಂಕಾರ, ದೀಪಾಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.