ADVERTISEMENT

ಅಂಗಡಿ ಬಾಡಿಗೆ ನೆಪ; ಆಭರಣ ದೋಚಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 16:21 IST
Last Updated 6 ಜೂನ್ 2019, 16:21 IST

ತುಮಕೂರು: ನಗರದ ಹೊರ ವಲಯದ ಯಲ್ಲಾಪುರದಲ್ಲಿ ಅಂಗಡಿ ಬಾಡಿಗೆ ಪಡೆಯುವ ನೆಪದಲ್ಲಿ ಮನೆಗೆ ನುಗ್ಗಿ ಹಲ್ಲೆ ನಡೆಸಿ ಆಭರಣ ₹ 5 ಲಕ್ಷ ಮೊತ್ತದ ಆಭರಣ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಭರಣ ಕಳೆದುಕೊಂಡವರು ಲೀಲಾವತಿ. ಬೆಂಗಳೂರಿನ ಉಪನೋಂದಣಿ ಅಧಿಕಾರಿ ಕಚೇರಿ ನೌಕರರಾಗಿದ್ದು, ಇವರ ಪತಿ ಬಿ.ಎಸ್. ಪರಶಿವಮೂರ್ತಿ ಕೊರಟಗೆರೆ ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ನೌಕರರಾಗಿದ್ದಾರೆ.

ಇವರ ವಾರಸುದಾರಿಕೆಯ ಶಿವಲೀಲಾ ಕಾಂಪ್ಲೆಕ್ಸ್ ಗೋಕುಲ ರೈಸ್ ಮಿಲ್ ಎದುರಿಗೆ ಇದೆ. ಈ ಕಾಂಪ್ಲೆಕ್ಸ್ ಮೇಲೆಯೇ ಇವರ ಮನೆ ಇದೆ. ಕಾಂಪ್ಲೆಕ್ಸ್‌ನಲ್ಲಿ ಮಳಿಗೆ ಕಾಲಿದ್ದುದ್ದರಿಂದ ಬಾಡಿಗೆ ಕೇಳಲು ಮೇ 26ರಂದು ಬೆಳಿಗ್ಗೆ ಮತ್ತು ಸಂಜೆ ಬಂದ ಅಪರಿಚಿತ ನಾಲ್ವರು ಅಡ್ವಾನ್ಸ್ ಕೊಡುವ ನೆಪದಲ್ಲಿ ಮನೆಯ ಒಳಗಡೆ ಹೋಗಿ ದಂಪತಿಗಳ ಮೇಲೆ ಹಲ್ಲೆ ನಡೆಸಿ ಆಭರಣ ದೋಚಿದ್ದಾರೆ.

ADVERTISEMENT

ದುಷ್ಕರ್ಮಿಗಳು ಹೋಗುವಾಗ ಮನೆಯ ಚಿಲಕ ಹಾಕಿ ಹೋಗಿದ್ದರು. ಅಕ್ಕಪಕ್ಕದ ನಿವಾಸಿಗಳಿಗೆ ಮೊಬೈಲ್ ಕರೆ ಮಾಡಿ ದಂಪತಿ ರಕ್ಷಣೆ ಪಡೆದು ಬಳಿಕ ಸ್ವಂತ ಊರಾದ ಮೈಸೂರಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬುಧವಾರ ತುಮಕೂರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.