ADVERTISEMENT

ವೈ.ಎನ್.ಹೊಸಕೋಟೆ: ಅಜ್ಜನ ಶ್ರಾವಣ ಜಾತ್ರೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 14:33 IST
Last Updated 31 ಆಗಸ್ಟ್ 2024, 14:33 IST
ವೈ.ಎನ್.ಹೊಸಕೋಟೆ ಹೋಬಳಿ ಅನ್ನಲಪುರಿ ಆಂಜನೇಯ ಜಾತ್ರೆಯಲ್ಲಿ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು
ವೈ.ಎನ್.ಹೊಸಕೋಟೆ ಹೋಬಳಿ ಅನ್ನಲಪುರಿ ಆಂಜನೇಯ ಜಾತ್ರೆಯಲ್ಲಿ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು   

ವೈ.ಎನ್.ಹೊಸಕೋಟೆ: ಹೋಬಳಿಯ ಅನ್ನಲಪುರಿ ಅಂಜನೇಯಸ್ವಾಮಿ ಅಜ್ಜನ ಶ್ರಾವಣ ಜಾತ್ರೆ ಶನಿವಾರ ನೆರವೇರಿತು.

ಪ್ರತಿವರ್ಷ ಶ್ರಾವಣದ ಕೊನೆ ಶನಿವಾರದಂದು ಜಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಬಂದು ದೇವರ ದರ್ಶನ ಪಡೆದರು.

ಹೋಬಳಿ ಕೇಂದ್ರದಿಂದ ಸುಮಾರು 5 ಕಿ.ಮೀ ದೂರದಲ್ಲಿ ಆಂಧ್ರಪ್ರದೇಶದ ರಸ್ತೆಯಲ್ಲಿ ಆಂಜನೇಯ ದೇವಾಲಯವಿದ್ದು, ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನೆರವೇರುತ್ತವೆ. ಕೊನೆಯ ಶನಿವಾರದಂದು ಹರಕೆ ಹೊತ್ತ ಭಕ್ತರ ಪಾಳಿಯಂತೆ ದೇವರಿಗೆ ವಿಳ್ಯದೆಲೆ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿದರು.

ADVERTISEMENT

ಬೆಳಿಗ್ಗೆಯಿಂದಲೇ ಅರ್ಧ ಕಿ.ಮೀ ದೂರ ಸರತಿ ಸಾಲಿನಲ್ಲಿ ಭಕ್ತರು ಸಾಗಿ ದೇವರ ದರ್ಶನ ಪಡೆದರು. ಜಾತ್ರೆ ಬಂದ ಜನತೆ ಮಂಡಕ್ಕಿಪುರಿ ಖರೀದಿಸಿ ಸವಿದು ಆನಂದಿಸಿದರು. ಆಗಾಗ್ಗೆ ಸುರಿಯುತ್ತಿದ್ದ ಮಳೆ ಹನಿಯಿಂದ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.

ಭಕ್ತರ ನೂಕುನುಗ್ಗಲನ್ನು ತಪ್ಪಿಸಲು ಕಂದಾಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯರು ಸೂಕ್ತ ವ್ಯವಸ್ಥೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.