ಶಿರಾ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಗಾಳಿ ಸಹಿತ ದಿಢೀರನೆ ಸುರಿದ ಮಳೆಗೆ ಮರವೊಂದು ಉರುಳಿದೆ.
ಬಿಸಿಲ ತಾಪಕ್ಕೆ ಹೈರಾಣಾಗಿದ್ದ ಜನರಿಗೆ ಮಳೆ ಹರ್ಷ ಮೂಡಿಸಿದರೆ ಸ್ವಲ್ಪ ಸಮಯದಲ್ಲಿಯೇ ಗಾಳಿಯ ಅರ್ಭಟದಲ್ಲಿ ಮಳೆ ನಿಂತು ನಿರಾಶೆ ಮೂಡಿಸಿತು.
ಗಾಳಿ ಜೋರಾಗಿ ಬೀಸಿದ ಕಾರಣ ಜ್ಯೋತಿನಗರದಲ್ಲಿ ಮರವೊಂದು ಉರುಳಿದೆ. ಈ ವರ್ಷ ಇದುವರೆಗೂ ಜೋರು ಮಳೆಯಾಗದೆ ಜನತೆ ಬಿಸಿಲಿಗೆ ಹೈರಾಣಾಗಿದ್ದು ಮುಗಿಲತ್ತ ನೋಡುವಂತಾಗಿದೆ.
ಶುಕ್ರವಾರ ಬಂದ ಸಾಧಾರಣ ಮಳೆ ಜನರಲ್ಲಿ ಆಶಾಭಾವ ಮೂಡಿಸಿದೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಮಳೆ ಮತ್ತು ಗಾಳಿಯಿಂದ ವ್ಯಾಪಾರಕ್ಕೆ ತೊಂದರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.