ADVERTISEMENT

Live | ಶಿರಾ ಉಪ ಚುನಾವಣೆ ಫಲಿತಾಂಶ: ಬಿಜೆಪಿಯ ರಾಜೇಶ್‌ಗೌಡಗೆ ಗೆಲುವು

ಮಾಜಿ ಸಚಿವ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಪ್ರಟಕವಾಗಿದೆ. ಜೆಡಿಎಸ್‌ನಿಂದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಬಿಜೆಪಿಯಿಂದ ರಾಜೇಶ್‌ಗೌಡ ಸ್ಪರ್ಧಿಸಿದ್ದರು. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದೆ. ಎರಡು ಕೊಠಡಿಗಳಲ್ಲಿ ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 10:56 IST
Last Updated 10 ನವೆಂಬರ್ 2020, 10:56 IST

Photos: ಶಿರಾದಲ್ಲಿ ವಿಜಯೇಂದ್ರ ವಿಜಯೋತ್ಸವ

ಕೊನೇ ಸುತ್ತಿನ ಮತ ಎಣಿಕೆ ವಿವರ

24ನೇ (ಕೊನೆ) ಸುತ್ತಿನ ಮತ ಎಣಿಕೆ ವಿವರ 

ಅಮ್ಮಾಜಮ್ಮ (ಜೆಡಿಎಸ್‌)- 35,982

ಟಿ.ಬಿ ಜಯಚಂದ್ರ (ಕಾಂಗ್ರೆಸ್‌)- 61,573

ADVERTISEMENT

ರಾಜೇಶ್‌ಗೌಡ (ಬಿಜೆಪಿ)-74,522

ಗೆಲುವಿನ ಅಂತರ-  12,949 

(ಅಂಚೆ ಮತಪತ್ರಗಳ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ)

ಶಿರಾಕ್ಕೆ ಆಗಮಿಸಿದ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ

ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ: ರಾಜೇಶ್‌ ಗೌಡ

ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ. ಕೇಂದ್ರ ಮತ್ತು ರಾಜ್ಯಸರ್ಕಾರದ ಅಭಿವೃದ್ಧಿ ನೋಡಿ ಮತ ಹಾಕಿದ್ದಾರೆ. ಯಾರೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ರಚಿಸಿರಲಿಲ್ಲ. ಯಡಿಯೂರಪ್ಪ ಅವರು ಮಾಡಿದರು. ಆ ಸಮಯದಾಯ ನಮ್ಮ ಕೈ ಹಿಡಿದಿದೆ. ಅವರ ಅಭಿವೃದ್ಧಿ ಗೆ ಕೆಲಸ ಮಾಡುವೆ. ಶಿರಾ ಕ್ಷೇತ್ರವನ್ನು ಶಿಕಾರಿಪುರ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆ ರೀತಿಯಲ್ಲಿ ನಡೆದುಕೊಳ್ಳುವರು.

ಮೂರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇವೆ. ನನಗೆ ಯಾವುದೇ ಸನ್ಮಾನ ಬೇಡ. ಈ ಕ್ಷೇತ್ರದ ಗೆಲುವಿಗೆ ಎಲ್ಲರೂ ಶ್ರಮಿಸಿದ್ದಾರೆ. ಗೆಲುವಿನ ಕ್ರೆಡಿಟ್ ಎಲ್ಲರಿಗೂ ಸೇರಿದೆ.

22 ಸುತ್ತಿನ ಎಣಿಕೆ ಮುಕ್ತಾಯ. ‌ಬಿಜೆಪಿ 14 ಸಾವಿರ ಲೀಡ್

ರಾಜೇಶ್‌ಗೌಡ ಮೊದಲ ಮಾತು

ನನಗೆ ಮಾರ್ಗದರ್ಶನ ನೀಡಿದ ಪಕ್ಷದ ವರಿಷ್ಠರಿಗೆ ಆಭಾರಿ. ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮತ್ತು ಯುವ ಸಮುದಾಯದ ಶ್ರಮ ನನ್ನ ಗೆಲುವಿನಲ್ಲಿ ಇದೆ.

ಎಲ್ಲ ಸಮುದಾಯದ ಜನರು ಬೆಂಬಲಿಸಿದ್ದಾರೆ.  ಮುಖ್ಯಮಂತ್ರಿ ಅವರು ಹೇಳಿದಂತೆ ಮದಲೂರು ಕೆರೆಗೆ ನೀರು ಹರಿಯಲಿದೆ.
ನೀರಾವರಿ ಮತ್ತು ಅಭಿವೃದ್ಧಿ ಗೆ ಆದ್ಯತೆ ನೀಡಲಾಗುವುದು. ನನಗೆ ದೊರೆತಿರುವ ಈ ಎರಡೂವರೆವವರ್ಷದ ಅವಧಿಯಲ್ಲಿ ಅಭಿವೃದ್ಧಿ ಗೆ ಆದ್ಯತೆ ನೀಡುವೆ.

ನೆಲ ಕಚ್ಚಿದ ಜೆಡಿಎಸ್

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ತೀವ್ರವಾಗಿ ನೆಲ ಕಚ್ಚಿದೆ ಆರಂಭದಿಂದಲೂ ಆ ಪಕ್ಷ ಗಮನಾರ್ಹವಾಗಿ ಮತಗಳನ್ನು ಪಡೆಯಲೇ ಇಲ್ಲ.

ಶಿರಾ ಜೆಡಿಎಸ್ ನ ಪ್ರಮುಖ ನೆಲೆ ಎನಿಸಿತ್ತು. ದೇವೇಗೌಡರು, ಕುಮಾರ ಸ್ವಾಮಿ, ಪ್ರಜ್ವಲ್, ರೇವಣ್ಣ, ನಿಖಿಲ್ ಹೀಗೆ ಇಡೀ ಅವರ ಕುಟುಂಬವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿತ್ತು. ಹುಲಿಕುಂಟೆ ಜವಾಬ್ದಾರಿಯನ್ನು ಪ್ರಜ್ವಲ್ ವಹಿಸಿಕೊಂಡಿದ್ದರು.
ಇಷ್ಟೆಲ್ಲ ಕಸರತ್ತು ಮಾಡಿದರೂ ಜೆಡಿಎಸ್ ಗೆ ತೀವ್ರ ಹಿನ್ನಡೆ ಆಗಿದೆ.

ಈ ಹಿಂದಿನ‌ ಚುನಾವಣೆಗಳಲ್ಲಿ ಲೀಡ್ ಪಡೆದಿದ್ದ ಮತಗಟ್ಟೆಗಳಲ್ಲೇ ಉಪಚುನಾವಣೆಯಲ್ಲಿ ಜೆಡಿಎಸ್ ಮತವನ್ನು ಪಡೆದಿಲ್ಲ. ಈಗಾಗಲೇ ಜೆಡಿಎಸ್ ನಿಂದ ಜಿಲ್ಲೆಯ ಹಲವು ನಾಯಕರು ಒಂದು ಕಾಲು ಹೊರಗಿಟ್ಟಿದ್ದಾರೆ.‌ ಭದ್ರಕೋಟೆಯಲ್ಲಿನ ಸೋಲು ವಲಸೆಯನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ.

21ನೇ ಸುತ್ತು ಬಿಜೆಪಿ ಮುನ್ನಡೆ

ಬಿಜೆಪಿ-66598
ಕಾಂಗ್ರೆಸ್-55725
ಜೆಡಿಎಸ್-30494
ನೋಟಾ-509

ಮತಗಳ ಅಂತರ-10873

ಖಚಿತವಾದ ಬಿಜೆಪಿ ಗೆಲುವು: ಅಧಿಕೃತ ಘೋಷಣೆ ಬಾಕಿ

10 ಸಾವಿರ ದಾಟಿದ ಬಿಜೆಪಿ ಲೀಡ್

ಶಿರಾ ಕ್ಷೇತ್ರದ 20ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದೆ. 10 ಸಾವಿರ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಗೆಲುವು ಖಚಿತ ಎನ್ನುವ ಸ್ಥಿತಿ ಇದೆ. 

ಬಿಜೆಪಿ-62481
ಕಾಂಗ್ರೆಸ್-52359
ಜೆಡಿಎಸ್-28439
ನೋಟಾ-509
ಬಿಜೆಪಿ ಅಂತರ-10122

ಬಿಜೆಪಿಗೆ 19ನೇ ಸುತ್ತಿನಲ್ಲಿ 8883 ಮತಗಳ ಮುನ್ನಡೆ

ಬಿಜೆಪಿ ಅಭ್ಯರ್ಥಿ ಸಿ.ಎಂ.ರಾಜೇಶ್ ಗೌಡ ಮುನ್ನಡೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿದ್ದಾರೆ. 19 ನೇ ಸುತ್ತಿನಲ್ಲಿ 8883 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ನಾಲ್ಕು ಸುತ್ತುಗಳ ಬಾಕಿ ಮಾತ್ರ ಇದೆ.

ಬಿಜೆಪಿ-59437
ಕಾಂಗ್ರೆಸ್-50544
ಜೆಡಿಎಸ್-27462
ನೋಟಾ-495
ಬಿಜೆಪಿ ಅಂತರ-8883

18ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ

ಸತತ 18ನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ.

ಬಿಜೆಪಿ-54630
ಕಾಂಗ್ರೆಸ್-47720
ಜೆಡಿಎಸ್-26099 
ನೋಟಾ-458

ಬಿಜೆಪಿ ಅಂತರ- 6910

ಕಳ್ಳಂಬೆಳ್ಳ ಹೋಬಳಿ ಮತ್ತು ಕಸಬಾ ಹೋಬಳಿಯ ಕೆಲವು ಮತಗಟ್ಟೆಗಳ ಎಣಿಕೆ ಬಾಕಿ ಇದೆ.

ಪ್ರಜಾವಾಣಿ ವಿಶ್ಲೇಷಣೆ

ಗೆಲುವಿನತ್ತ ಸಾಗಲಿದೆಯೇ ಬಿಜೆಪಿ?

17ನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದ್ದು ಬಿಜೆಪಿ 5,403 ಮತಗಳ ಮುನ್ನಡೆ ಸಾಧಿಸಿದೆ.

ಇನ್ನು 7 ಸುತ್ತಿನ ಮತ ಎಣಿಕೆ ಬಾಕಿ ಇದೆ. ಅಂಚೆ ಮತಗಳು ಯಾವ ಪಕ್ಷಕ್ಕೆ ಹೆಚ್ಚು ಒಲಿದಿವೆ ಎನ್ಬುವ ಮಾಹಿತಿ ಹೊರಬೀಳಬೇಕಿದೆ.

ಬಿಜೆಪಿ-51289
ಕಾಂಗ್ರೆಸ್-45886
ಜೆಡಿಎಸ್-25197
ನೋಟಾ- 434

ಬಿಜೆಪಿ ಅಂತರ-5403

ಪ್ರಜಾವಾಣಿ ವಿಶ್ಲೇಷಣೆ

ಮತ್ತೆ ಚೇತರಿಸಿಕೊಂಡ ಬಿಜೆಪಿ

14 ಮತ್ತು 15ನೇ ಸುತ್ತಿನಲ್ಲಿ ಕಡಿಮೆಯಾಗಿದ್ದ ಬಿಜೆಪಿ ಮುನ್ನಡೆ 16ನೇ ಸುತ್ತಿನಲ್ಲಿ ಸ್ವಲ್ಪ ಹೆಚ್ಚಿದೆ.

ಬಿಜೆಪಿ-47608
ಕಾಂಗ್ರೆಸ್-43811
ಜೆಡಿಎಸ್-23822
ನೋಟಾ- 406

ಬಿಜೆಪಿ ಅಂತರ-3797

ಸಿಪಿಐ ಅಭ್ಯರ್ಥಿಗೆ 800 ಮತ

ತುಮಕೂರು: ಸಿಪಿಐ ಅಭ್ಯರ್ಥಿ ಗಿರೀಶ್ 893 ಮತಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಓಬಳೇಶಪ್ಪ 403, ಪಕ್ಷೇತರ ಸಾಧಿಕ್ ಪಾಷ 415, ಸಾಮಾಜಿಕ ಹೋರಾಟಗಾರ ಆಂಬ್ರೋಸ್ ಡಿ ಮೆಲ್ಲೊ 86 ಮತಗಳನ್ನು ಪಡೆದಿದ್ದಾರೆ.

ಇಲ್ಲಿಯವರೆಗೂ 1,18,592 ಮತಗಳ ಎಣಿಕೆ ಪೂರ್ಣವಾಗಿದೆ. ಇನ್ನು  61 ಸಾವಿರ ಮತಗಳ ಎಣಿಕೆ ಬಾಕಿ ಇದೆ.

ದೇಶದಲ್ಲಿ ಪರಿವರ್ತನೆಯ ಗಾಳಿ: ನಳಿನ್

ಮಂಗಳೂರು: ದೇಶದಲ್ಲಿ ಪರಿವರ್ತನೆಯ ಗಾಳಿಯನ್ನು ಕಾಣಬಹುದು. ಎಲ್ಲೆಡೆ ನಿರೀಕ್ಷೆ ಮೀರಿ ಬಿಜೆಪಿಗೆ ಜಯ ಲಭಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. 

ನಗರದಲ್ಲಿ ಮಂಗಳವಾರ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.

ಎಲ್ಲೆಡೆ ಬಿಜೆಪಿ ಸಾಮೂಹಿಕ ನಾಯಕತ್ವ ಕ್ಕೆ ಜಯ ಸಿಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.

ಯಡಿಯೂರಪ್ಪ ನಾಯಕತ್ವ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.
ವಿಪಕ್ಷಗಳು ಟೀಕೆ ಮಾಡಿದರೂ, ಜನರ ಒಲವು ಬಿಜೆಪಿಯತ್ತ ಇದೆ ಎಂದರು.

ಶಿರಾದಲ್ಲಿ ಪಂಚಪಾಂಡವರು ಹಾಗೂ ರಾಜರಾಜೇಶ್ವರಿ ನಗರದಲ್ಲಿ ಅಶೋಕ್ ಹಾಗೂ ಲಿಂಬಾವಳಿ ಅವರು ಜೋಡೆತ್ತು ರೀತಿಯಲ್ಲಿ ದುಡಿದು ಪಕ್ಷವನ್ನು ಗೆಲ್ಲಿಸಿದ್ದಾರೆ. ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಬಂಡೆ, ಹುಲಿಯಾ ಎಲ್ಲವನ್ನೂ ಜನರು ತಿರಸ್ಕರಿಸಿದ್ದು, ಅವರು ಎಲ್ಲೆಲ್ಲಿ ಇದ್ದಾರೆ ಎಂದು ಹುಡುಕಬಹುದು ಎಂದು ಟೀಕಿಸಿದರು.

ರೋಚಕ ತಿರುವು

14 ಮತ್ತು 15ನೇ ಸುತ್ತು ರೋಚಕ ತಿರುವು ಪಡೆದಿದೆ. ಈ ಎರಡು ಸುತ್ತುಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಮತಗಳನ್ನು ಪಡೆದಿದೆ.

13ನೇ ಸುತ್ತಿನಲ್ಲಿ 7700 ಇದ್ದ ಬಿಜೆಪಿ ಲೀಡ್ 15ನೇ ಸುತ್ತು ಪೂರ್ಣವಾದಾಗ 1865ಕ್ಕೆ ಇಳಿದಿದೆ.

ಈ‌ ಮತಗಟ್ಟೆಗಳು ಶಿರಾ ನಗರ ವ್ಯಾಪ್ತಿಯವು ಎನ್ನಲಾಗಿದೆ. ಶಿರಾ ನಗರದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. 

ಇನ್ನು ಕಳ್ಳಂಬೆಳ್ಳ ಹೋಬಳಿ ಮತ ಎಣಿಕೆ ಬಾಕಿ ಇದೆ. ಹೀಗೆ ಹಾವು ಏಣಿ ಆಟ ಕುತೂಹಲ ಮೂಡಿಸಿದೆ. 

ಜೆಡಿಎಸ್ ಮತಗಳಿಕೆಯಲ್ಲಿ ಗಣನೀಯವಾಗಿ ಹಿಂದಿದೆ.

ಬಿಜೆಪಿ-43684
ಕಾಂಗ್ರೆಸ್-41819
 ಜೆಡಿಎಸ್-23501
ನೋಟಾ-373

ಬಿಜೆಪಿ ಅಂತರ-1865

ಕುಸಿದ ಬಿಜೆಪಿ ಲೀಡ್

ಕುಸಿದ ಬಿಜೆಪಿ ಲೀಡ್

14ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಲೀಡ್ ಕುಸಿದಿದೆ. 13ನೇ ಸುತ್ತು ಪೂರ್ಣವಾದಗ 7 ಸಾವಿರ ಮತಗಳ ಮುನ್ನಡೆಯನ್ನು ಬಿಜೆಪಿಗಳಿಸಿತ್ತು. 14ನೇ ಸುತ್ತಿನಲ್ಲಿ ಆ ಲೀಡ್ 3 ಸಾವಿರಕ್ಕೆ ಇಳಿದಿದೆ. ಇದೇ ಮೊದಲ ಬಾರಿಗೆ ಬಿಜೆಪಿಗಿಂತ ಹೆಚ್ಚುಮತಗಳನ್ಬು ಕಾಂಗ್ರೆಸ್ ಪಡೆದಿದೆ. 

ಬಿಜೆಪಿ-41803
ಕಾಂಗ್ರೆಸ್- 38017
ಜೆಡಿಎಸ್-21697
ನೋಟಾ- 365

ಬಿಜೆಪಿಯ ಮುನ್ನಡೆ- 3786
 

ಒಟ್ಟಾರೆ ಚಿತ್ರಣ

ಶಿರಾ ವಿಧಾನಸಭೆ ಉಪಚುನಾವಣೆಯ 12ನೇ ಸುತ್ತಿನ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಟ್ಟು 24 ಸುತ್ತುಗಳಲ್ಲಿ ಅರ್ಧದಷ್ಟು ಮತಗಳ ಎಣಿಕೆ ಮುಗಿದಿದ್ದು, ಬಿಜೆಪಿ 7,870 ಮತಗಳ ಮುನ್ನಡೆ ಸಾಧಿಸಿದ್ದಾರೆ. ರಾಜೇಶ್‌ಗೌಡ 37,808, ಕಾಂಗ್ರೆಸ್‌ನ ಜಯಚಂದ್ರ 29,938, ಜೆಡಿಎಸ್‌ನ ಅಮ್ಮಾಜಮ್ಮ 19,522 ಮತಗಳನ್ನು ಪಡೆದಿದ್ದಾರೆ.

ಇನ್ನೂ 12 ಸುತ್ತುಗಳ ಮತ ಎಣಿಕೆ ನಡೆಯಬೇಕಿದೆ. ಶಿರಾ ನಗರ, ಕಸಬಾ ಹೋಬಳಿ, ಕಳ್ಳಂಬೆಳ್ಳ ಭಾಗದ ಮತ ಎಣಿಕೆ ಬಾಕಿ ಇದೆ. ಶಿರಾ ನಗರ, ಕಳ್ಳಂಬೆಳ್ಳ ಭಾಗದಲ್ಲೇ ಹೆಚ್ಚು ಮತಗಳು ಬರಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ. ಆದರೆ ಪ್ರತಿ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

13ನೇ ಸುತ್ತಿನ ನಂತರ ಬಿಜೆಪಿಗೆ 41642 ಮತ

ಬಿಜೆಪಿ 41642
ಕಾಂಗ್ರೆಸ್-33151
ಜೆಡಿಎಸ್-20356
ನೋಟಾ- 352

ಮತಗಳ ಅಂತರ- 8491

12ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿಗೆ 7870 ಮತಗಳ ಮುನ್ನಡೆ

ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ನಿರಂತರವಾಗಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿ ಮತ ಎಣಿಕೆ ಪೂರ್ಣವಾಗಿದೆ.‌

ಕಳ್ಳಂಬೆಳ್ಳ ಮತ್ತು‌ ಶಿರಾ ನಗರ ಒಳಗೊಂಡ ಕಸಬಾ ಹೋಬಳಿ ಮತ ಎಣಿಕೆ ಬಾಕಿ ಇದೆ.

ಬಿಜೆಪಿ 37808
ಕಾಂಗ್ರೆಸ್ 29938
ಜೆಡಿಎಸ್ 19522
ನೋಟಾ- 335

ಬಿಜೆಪಿಯ ಮುನ್ನಡೆಯ ಅಂತರ- 7870

11ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ.

ಪ್ರತಿ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ‌. 

ಬಿಜೆಪಿ: 34,068
ಕಾಂಗ್ರೆಸ್: 27,173
ಜೆಡಿಎಸ್: 18,169

ಮತದಾರರ ತೀರ್ಪಿಗೆ ತಲೆಬಾಗಲೇ ಬೇಕು: ಡಿಕೆಶಿ

ಬೆಂಗಳೂರು: ಮತದಾರರು ನೀಡಿದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಉಪ ಚುನಾವಣೆಯ ನಡೆದ ಆರ್‌.ಆರ್‌. ನಗರ ಮತ್ತು ಶಿರಾ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಿನ್ನಡೆಯಲ್ಲಿದೆ. ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮತ ಎಣಿಕೆ ಮುಗಿಯಲು ಇನ್ನೂ ಒಂದೂವರೆಗೆ ಗಂಟೆ ಇದೆ. ಫಲಿತಾಂಶದಲ್ಲಿ ಏನು ಬೇಕಾದರೂ ಆಗುವುದು. ನೋಡೋಣ’ ಎಂದರು.

10ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ.

ಬಿಜೆಪಿ: 30,883
ಕಾಂಗ್ರೆಸ್: 24,908
ಜೆಡಿಎಸ್: 16,911

ಬಿಜೆಪಿ ಅಂತರ-  5975

ಬಿಜೆಪಿ ಅಭ್ಯರ್ಥಿ ಸಿ.ಎಂ.ರಾಜೇಶ್ ಗೌಡ ಅವರ ಹೋಬಳಿ ಹುಲಿಕುಂಟೆಯ ಮತ ಎಣಿಕೆ ಪೂರ್ಣವಾಗಿದೆ. ರಾಜೇಶ್ ಗೌಡ ಅವರದ್ದು ಹುಲಿಕುಂಟೆ ಹೋಬಳಿ ಚಿರತನಹಳ್ಳಿ.

ಮತಗಳಿಕೆ ವಿವರ

ಬಿ.ಎಚ್.ರಸ್ತೆಯಲ್ಲಿ ಹೆಚ್ಚಿದ ಬಿಜೆಪಿ ಕಾರ್ಯಕರ್ತರು

ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ ಹೆಚ್ಚಿಸಿಕೊಳ್ಳುತ್ತಿರುವಂತೆ ಮತ ಎಣಿಕೆ ನಡೆಯುತ್ತಿರುವ ಪಾಲಿಟೆಕ್ನಿಕ್ ಕಾಲೇಜು ಬಳಿಯ ಬಿ‌.ಎಚ್.ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಜಯಘೋಷ ಹೆಚ್ಚಿದೆ

ಏರುತ್ತಿದೆ ಬಿಜೆಪಿಯ ಮತಗಳ ಅಂತರ

ಬಿಜೆಪಿ: 27,207
ಕಾಂಗ್ರೆಸ್: 22,430
ಜೆಡಿಎಸ್: 15,05
ನೋಟ: 258


ಬಿಜೆಪಿ ಅಂತರ-  4777

ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿದ ಬಿಜೆಪಿ

ತುಮಕೂರು: ಶಿರಾ ಉಪಚುನಾವಣೆಯ ಎಂಟು ಸುತ್ತುಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. 7ನೇ ಸುತ್ತಿನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮತ ಮುನ್ನಡೆ ಪಡೆಯುವ ಮೂಲಕ ಅಂತರ ಸಹ ಹೆಚ್ಚಿಸಿಕೊಂಡಿದೆ.

ಬಿಜೆಪಿಗೆ ಲೀಡ್ ಹೆಚ್ಚಾದಷ್ಟು ಆ ಪಕ್ಷದ ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಜಯದ ಘೋಷಣೆ ಮೊಳಗಿಸುತ್ತಿದ್ದಾರೆ. ವಿಜಯದ ಸಂಕೇತ ತೋರುತಿದ್ದಾರೆ.

8ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ

ಬಿಜೆಪಿ: 24,300
ಕಾಂಗ್ರೆಸ್: 20,327
ಜೆಡಿಎಸ್: 13,191
ಬಿಜೆಪಿ ಮುನ್ನಡೆ: 3973

ಶಿರಾ ಕ್ಷೇತ್ರದ ಮತ ಎಣಿಕೆಯ ಒಟ್ಟಾರೆ ಚಿತ್ರಣ

ತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ವಿಧಾನಸಭೆ ಉಪಚುನಾವಣೆ 6ನೇ ಸುತ್ತಿನ ಮತದಾನ ಮುಕ್ತಾಯ ಕಂಡಿದ್ದು, ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ಅವರಿಗೆ ಅಲ್ಪ ಪ್ರಮಾಣದ ಹಿನ್ನಡೆಯಾಗಿದೆ. ಆದರೆ ಒಟ್ಟಾರೆ ಮತ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಸತತವಾಗಿ 5ನೇ ಸುತ್ತಿನ ವರೆಗೆ ಮುನ್ನಡೆ ಕಂಡಿದ್ದ ಬಿಜೆಪಿಗೆ 6ನೇ ಸುತ್ತಿನಲ್ಲಿ ನಿರೀಕ್ಷಿತ ಮತಗಳು ಬಂದಿಲ್ಲ. ಈ ಸುತ್ತಿನಲ್ಲಿ ಕಾಂಗ್ರೆಸ್‌ನ ಜಯಚಂದ್ರ 94 ಮತಗಳ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್‌ನ ಅಮ್ಮಾಜಮ್ಮ ಮೂರನೇ ಸ್ಥಾನದಲ್ಲಿ ಇದ್ದಾರೆ.

ರಾಜೇಶ್‌ಗೌಡ 16,909, ಜಯಚಂದ್ರ 15,515, ಅಮ್ಮಾಜಮ್ಮ 10,345 ಮತಗಳನ್ನು ಪಡೆದಿದ್ದಾರೆ. ಒಟ್ಟಾರೆ ಬಿಜೆಪಿ 1,394 ಮತಗಳ ಮುನ್ನಡೆ ಸಾಧಿಸಿದೆ

7ನೇ ಸುತ್ತಿನ ನಂತರ ಅಂತರ ಹೆಚ್ಚಿಸಿಕೊಂಡ ಬಿಜೆಪಿ

7ನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ. ಈ ಸುತ್ತಿನಲ್ಲಿ ಬಲ ಹೆಚ್ಚಿಸಿಕೊಂಡ ಬಿಜೆಪಿ‌. 

ಬಿಜೆಪಿ: 21,401
ಕಾಂಗ್ರೆಸ್: 18,072
ಜೆಡಿಎಸ್: 11,648

ಬಿಜೆಪಿಯ ಅಂತರ: 3325 

ಆರನೇ ಸುತ್ತಿಗೆ ಹೋಲಿಸಿದರೆ ಒಂದೂವರೆ ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಬಿಜೆಪಿ ಸಾಧಿಸಿದೆ.

6 ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ: ಪ್ರತಿ ಹಂತದಲ್ಲೂ ಅಂತರ ಕುಸಿತ

ಸತತ ಆರನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಎಂ.ಸಿ.ರಾಜೇಶ್ ಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ-16909
ಕಾಂಗ್ರೆಸ್-15515
ಜೆಡಿಎಸ್-10345  

ಬಿಜೆಪಿ ಮುನ್ನಡೆ-1394

ಪ್ರತಿ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡರೂ ಒಂದೊಂದು ಸುತ್ತಿನಲ್ಲಿ ಮುನ್ನಡೆಯ ಮತಗಳು ಏರುಪೇರಾಗುತ್ತಿವೆ.

ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಯ ಮತಗಟ್ಟೆಗಳ ಎಣಿಕೆ ಈಗ ನಡೆಯುತ್ತಿದೆ.

ಐದನೇ ಸುತ್ತಿನ ವಿವರ

ಇತರರ ಮತಗಳಿಕೆ

ಶಿರಾ ಉಪಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಗಿರೀಶ್ 378, ಪಕ್ಷೇತರ ಅಭ್ಯರ್ಥಿ ದೇವರಾಜ 113, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಓಬಳೇಶಪ್ಪ 145, ಪಕ್ಷೇತರ ಸಾಧಿಕ್ ಪಾಷ 95 ಮತಗಳನ್ನು ಪಡೆದಿದ್ದಾರೆ.

ಕನಿಷ್ಠ ಪ್ರಮಾಣದಲ್ಲಿ ಬಲವೃದ್ಧಿ

ಪ್ರತಿ ಸುತ್ತಿನಲ್ಲಿಯೂ ಕನಿಷ್ಠ ಪ್ರಮಾಣದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡು ಸಾಗುತ್ತಿದೆ. 

ಮೊದಲ ಸುತ್ತಿನಲ್ಲಿ ಬಿಜೆಪಿ 795, ಎರಡನೇ ಸುತ್ತಿನಲ್ಲಿ 1,707, ಮೂರನೇ ಸುತ್ತಿನಲ್ಲಿ 1,303 ಮತ್ತು ನಾಲ್ಕನೆಯ 1,504 ಮತ್ತು ಐದನೇ  ಸುತ್ತಿನಲ್ಲಿ 1,425 ಮತಗಳ ಮುನ್ನಡೆಯನ್ನು ಬಿಜೆಪಿ ಸಾಧಿಸಿದೆ.

ಐದನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

ಐದನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ.

ಜೆಡಿಎಸ್ 8643
ಬಿಜೆಪಿ 13846
ಕಾಂಗ್ರೆಸ್ 12421
ನೋಟಾ 153


ಮುನ್ನಡೆ: ಬಿಜೆಪಿ: 1425 

ಒಟ್ಟು 24 ಸುತ್ತುಗಳಿದ್ದು ಐದು ಸುತ್ತುಗಳು ಪೂರ್ಣವಾಗಿವೆ.

ಇನ್ನು 19 ಸುತ್ತುಗಳ ಮತ ಎಣಿಕೆ ಬಾಕಿ ಉಳಿದಿವೆ.

ನಾಲ್ಕನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ

ಶಿರಾ ಉಪಚುನಾವಣೆ ನಾಲ್ಕನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 


ಬಿಜೆಪಿ: 11,645
ಕಾಂಗ್ರೆಸ್:10,141
ಜೆಡಿಎಸ್: 6259

1504 ಮತಗಳಲ್ಲಿ ಬಿಜೆಪಿ‌ ಮುನ್ನಡೆ ಸಾಧಿಸಿದೆ.

117 ನೋಟ ಮತಗಳು ಚಲಾವಣೆ ಆಗಿವೆ.

ನಿಷೇಧಾಜ್ಞೆ ಉಲ್ಲಂಘನೆ

ಮತ ಎಣಿಕೆ ಕೇಂದ್ರದ ಐದು ಕಿಲೋಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿದೆ. ಐದು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡಬಾರದು. ಆದರೆ ಬಿ.ಎಚ್.ರಸ್ತೆಯಲ್ಲಿ ಪೊಲೀಸರ ಎದುರೇ ಬಿಜೆಪಿ ಕಾರ್ಯಕರ್ತರು ಗುಂಪುಗೂಡಿ ಜಯದ ಘೋಷಣೆ ಕೂಗಿದರು.

ಗೆಲುವಿನ‌ ಸಂಭ್ರಮದಲ್ಲಿ ಬಿಜೆಪಿ

ಮೂರನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಸಾಗಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಗೆದ್ದ ಸಂಭ್ರಮದಲ್ಲಿ ಇದ್ದಾರೆ.

ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ಗೆಲುವಿನ ಸಂಕೇತ ತೋರಿದರು.

ಕಡಿಮೆಯಾದ ಅಂತರ

 ಎರಡನೇ ಸುತ್ತಿನಲ್ಲಿ ಬಿಜೆಪಿ 1707 ಮತಗಳ ಮುನ್ನಡೆಯಲ್ಲಿ ಇತ್ತು. ಮೂರನೇ ಸುತ್ತು ಪೂರ್ಣವಾದ ವೇಳೆಗೆ 1,303 ಮತಗಳಿಗೆ ಇಳಿಕೆ ಆಗಿದೆ.

ಮೂರನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ 

ಮೂರನೇ ಸುತ್ತಿನ ಮತ ಎಣಿಕೆ ಪೂರ್ಣ

ಬಿಜೆಪಿ: 8642
ಕಾಂಗ್ರೆಸ್:7339
ಜೆಡಿಎಸ್: 4631

1,303 ಮತಗಳಲ್ಲಿ ಬಿಜೆಪಿ‌ ಮುನ್ನಡೆ ಸಾಧಿಸಿದೆ.

90 ನೋಟ ಮತಗಳು ಚಲಾವಣೆ ಆಗಿವೆ.

ಎರಡನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ

ಶಿರಾ ಉಪಚುನಾವಣೆ ಎರಡನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 

ಎರಡನೇ ಸುತ್ತಿನ ಮತ ಎಣಿಕೆ ಪೂರ್ಣವಾಗಿದೆ.

ಬಿಜೆಪಿ: 6436
ಕಾಂಗ್ರೆಸ್:4729
ಜೆಡಿಎಸ್: 2714

1,707 ಮತಗಳಲ್ಲಿ ಬಿಜೆಪಿ‌ ಮುನ್ನಡೆ ಸಾಧಿಸಿದೆ. 

14,405; ಮತಗಳು ಎಣಿಕೆಯಾಗಿವೆ.

62: ನೋಟ ಮತಗಳು ಚಲಾವಣೆ ಆಗಿವೆ.

ಮೊದಲ ಸುತ್ತಿನಲ್ಲಿ 37 ನೋಟಾ

ಶಿರಾ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, 37 ನೋಟಾ ಮತಗಳು ಚಲಾವಣೆಯಾಗಿವೆ. 

ಪಕ್ಷೇತರ ಅಭ್ಯರ್ಥಿಯ ಪ್ರತಿಭಟನೆ

ತುಮಕೂರು: ಶಿರಾ ಉಪಚುನಾವಣೆ ಪಕ್ಷೇತರ ಅಭ್ಯರ್ಥಿ ಆಂಬ್ರೋಸ್ ಡಿ.ಮೆಲ್ಲೊ ಮತ ಎಣಿಕೆ ಕೇಂದ್ರದ ಒಳಗೆ ತಮ್ಮನ್ನು ಬಿಡುತ್ತಿಲ್ಲ ಎಂದು ಆರೋಪಿಗೆ ಎಣಿಕೆ ಕೇಂದ್ರದ ಆವರಣದಲ್ಲಿ ಪ್ರತಿಭಟಿಸಿದರು.

ಪ್ರಗತಿಪರ ಹೋರಾಟಗಳಲ್ಲಿ ಆಂಬ್ರೋಸ್ ಗುರುತಿಸಿಕೊಂಡಿದ್ದಾರೆ.

ನೀರು ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೌನ ಪ್ರತಿಭಟನೆ ನಡೆಸುತ್ತಿರುವ ಆಂಬ್ರೋಸ್ ಈ ಕಾರಣದಿಂದ ನಾಡಿಗೆ ಪರಿಚಿತರು.

ಮೊದಲ ಸುತ್ತಿನಲ್ಲಿ ಬಿಜೆಪಿಗೆ ಮುನ್ನಡೆ: ಮತಗಳ ವಿವರ ಇಲ್ಲಿದೆ

ರಾಜೇಶ್‌ ಗೌಡ- ಬಿಜೆಪಿ: 3224
ಟಿ.ಬಿ ಜಯಚಂದ್ರ- ಕಾಂಗ್ರೆಸ್: 2329
ಅಮ್ಮಾಜಮ್ಮ- ಜೆಡಿಎಸ್: 1135

ಮತ ಎಣಿಕೆ ಕೇಂದ್ರದ ಹೊರಗೆ ಬೆಂಬಲಿಗರ ಜಮಾವಣೆ

ಮತ ಎಣಿಕೆ ನಡೆಯುತ್ತಿರುವ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದ ಬಿ.ಎಚ್.ರಸ್ತೆಯಲ್ಲಿ ಆಯಾ ಪಕ್ಷಗಳ ಬೆಂಬಲಿಗರು ಜಮಾಯಿಸುತ್ತಿದ್ದಾರೆ.

ಆರೋಗ್ಯ ತಪಾಸಣೆ

ಮತ ಎಣಿಕೆ ಕೇಂದ್ರಕ್ಕೆ ಬರುವವರನ್ನು ಆರೋಗ್ಯ ಕಾರ್ಯಕರ್ತರು ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದಾರೆ. ಕೋವಿಡ್‌ ನಿಯಮಾವಳಿಗಳನ್ನು ಇಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. 

ಮತ ಎಣಿಕೆ ಕಾರ್ಯ ಆರಂಭ

ಶಿರಾ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ. 

ಒಟ್ಟು 1,77,645 ಮತಗಳ ಎಣಿಕೆ

ಶಿರಾ ಕ್ಷೇತ್ರದಲ್ಲಿ 2,15 ಲಕ್ಷ ಮತದಾರರಲ್ಲಿ 1,77,645 ಮತದಾರರು ಹಕ್ಕು ಚಲಾಯಿಸಿದ್ದರು.

ನಿಜವಾಗುತ್ತಾ ಮತದಾನೋತ್ತರ ಸಮೀಕ್ಷೆ?

ಗದ್ದುಗೆ ಯಾರಿಗೆ

ಫಲಿತಾಂಶಕ್ಕೆ ಮೊದಲೇ ಲಾಬಿ

8 ಗಂಟೆಗೆ ಮತ ಎಣಿಕೆ ಆರಂಭ

ಶಿರಾ ವಿಧಾನಸಭೆ ಚುನಾವಣೆಯ ಮತ ಎಣಿಗೆ ಬೆಳಿಗ್ಗೆ 8 ಗಂಟೆಗೆ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.